ಮನರಂಜನೆ

ಬಾಲಿವುಡ್ ನಟ ಅಕ್ಷಯ್‍ ಕುಮಾರ್ ಅಂಗರಕ್ಷಕ ಮನೋಜ್ ಶರ್ಮಾ ರೈಲಿಗೆ ಸಿಲುಕಿ ಸಾವು

ಖತ್ರೋಕಾ ಕಿಲಾಡಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಬಾಡಿಗಾರ್ಡ್ ಚಲಿಸುತ್ತಿದ್ದ ರೈಲಿಗೆ ಸಿಲುಕಿ ದುರಂತ ಅಂತ್ಯ ಕಂಡಿರುವ ಘಟನೆಯು ಮಧುರಾ ಜಂಕ್ಷನ್‍ನಲ್ಲಿ ಜರುಗಿದೆ.

ಬಾಲಿವುಡ್‍ನ ಕಿಲಾಡಿ ಅಕ್ಷಯ್ ಕುಮಾರ್‍ ಅವರ ಖಾಸಗಿ ಅಂಗರಕ್ಷಕ ಮನೋಜ್ ಶರ್ಮಾ ಅವರೇ ಮೃತಪಟ್ಟ ದುರ್ದೈವಿಯಾಗಿದ್ದು ಅವರು, ಮಧುರಾ ದೆಹಲಿ-ಬೆಂಗಳೂರು ನಡುವೆ ಸಂಚರಿಸುವ ಕರ್ನಾಟಕ ಏಕ್ಸ್‍ಪ್ರೆಸ್‍ ರೈಲಿನಲ್ಲಿ ಆಗ್ರಾದಿಂದ ಮಧುರಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ಮಧುರಾದಲ್ಲಿ ಇಳಿಯುವ ವೇಳೆ ರೈಲು ಚಲಿಸಲು ಆರಂಭವಾಗಿ ವೇಗ ಪಡೆದಿದೆ. ಆ ಸಮಯದಲ್ಲಿ ನಿಯಂತ್ರಣ ತಪ್ಪಿ ರೈಲು ಹಳಿಗೆ ಬಿದ್ದಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

Leave a Reply

comments

Related Articles

error: