
ಮೈಸೂರು
ಸಂಪೂರ್ಣ ಬೆಳೆಸಾಲ ಮನ್ನಾ ಮಾಡದೇ ಕುಮಾರಸ್ವಾಮಿ ಯವರು ಮಾತಿಗೆ ತಪ್ಪಿದ್ದಾರೆ : ಬಡಗಲಪುರ ನಾಗೇಂದ್ರ ಆರೋಪ
ಮೈಸೂರು,ಜು.8:- ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸಂಪೂರ್ಣ ಬೆಳೆಸಾಲ ಮನ್ನಾ ಮಾಡದೇ ಕುಮಾರಸ್ವಾಮಿ ಯವರು ಮಾತಿಗೆ ತಪ್ಪಿದ್ದಾರೆ ಎಂದು ರಾಜ್ಯ ರೈತ ಸಂಘದ ಪ್ರದಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ ರಾಜ್ಯದ ರೈತರು ಪಡೆದಿರುವ ಬೆಳೆಸಾಲ 53 ಸಾವಿರ ಕೋಟಿಗಳನ್ನು ಪೂರ್ಣ ಮನ್ನಾ ಮಾಡುವುದಾಗಿ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಸುಸ್ತಿ ಉಳಿಸಿಕೊಂಡಿರುವ ರೈತರ ಬೆಳೆಸಾಲ ಕೇವಲ 2 ಲಕ್ಷ ಮನ್ನಾ ಮಾಡುವುದಾಗಿ ತೀರ್ಮಾನಿಸಿ ಮಾತಿಗೆ ತಪ್ಪಿ ರೈತ ಸಮುದಾಯಕ್ಕೆ ಮೋಸ ಮಾಡಿದ್ದಾರೆ, ಕುಮಾರಸ್ವಾಮಿ ಯವರ ಮಾತನ್ನು ನಂಬಿ ಬಾರಿ ನಿರೀಕ್ಷೆಯಲ್ಲಿದ್ದರು.ಇದೀಗ ರೈತರು ಆಘಾತಕ್ಕೆ ಒಳಗಾಗಿದ್ದು,, ಇದರಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಆದ್ದರಿಂದ ಸರ್ಕಾರವು ಕೂಡಲೇ ಸಂಪೂರ್ಣ ಸಾಲ ಮನ್ನಾ ಮಾಡಬೇಕು , ಇಸ್ರೇಲ್ ಮಾದರಿ ರೈತರ ಬೇಸಾಯ ಪದ್ಧತಿ ಪ್ರಯೋಗವನ್ನು ಕೈಬಿಡಬೇಕು, ಮತ್ತು ಸರ್ಕಾರಿ ಶಾಲೆ ಮುಚ್ಚುವುದನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿ ಯಲ್ಲಿ ರೈತ ಸಂಘದ ಮರಂಕಯ್ಯ, ಸರಗೂರು ನಟರಾಜು , ಹೊಸೂರ್ ಕುಮಾರ್ ಸೇರಿದಂತೆ ಹಲವರು ರೈತ ಮುಖಂಡರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)