
ಮೈಸೂರು
ಕಬಿನಿ ಹಿನ್ನೀರಿನಲ್ಲಿ ಅಪರಿಚಿತ ಶವ ಪತ್ತೆ
ಮೈಸೂರು,ಜು.9:- ಎಚ್.ಡಿ.ಕೋಟೆ ತಾಲೂಕಿನ ಉದ್ಬೂರು ಬಳಿ ಕಬಿನಿ ಹಿನ್ನೀರಿನಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದೆ.
ಕೇರಳ ಮೂಲದ ಸುಮಾರು 43ವರ್ಷದ ಮೃತ ವ್ಯಕ್ತಿಯ ದೇಹ ಕಂಡು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಎಚ್.ಡಿ.ಕೋಟೆ ತಾಲೂಕಿನ ಉದ್ಬೂರು ಬಳಿ ನೀರಿನಲ್ಲಿ ಮೃತದೇಹ ತೇಲಿ ಬಂದಿದ್ದು, ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹವನ್ನು ಸ್ಥಳಾಂತರಿಸಲಾಗಿದೆ. ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)