ದೇಶ

ಗಂಗಾ ನದಿಯಲ್ಲಿ ಜಲಸಮಾಧಿಯಾದ ಆರು ಬಾಲಕರು

ಕಾನ್ಪುರ,ಜು.9-ಗಂಗಾ ನದಿಯ ನೀರಿನಲ್ಲಿ ಆರು ಮಕ್ಕಳು ಕೊಚ್ಚಿ ಹೋಗಿ ಜಲಸಮಾಧಿಯಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಭಾನುವಾರ ಮಧ್ಯಾಹ್ನದ ವೇಳೆಗೆ 10-12 ವರ್ಷದ ಬಾಲಕರು ಗಂಗಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದರು. ಆದರೆ, ನೀರಿನ ಸೆಳೆತಕ್ಕೆ ಸಿಲುಕಿ ಅವರು ಕೊಚ್ಚಿಕೊಂಡು ಹೋಗಿದ್ದರು. ಇದನ್ನು ಕಂಡ ಸ್ಥಳೀಯರು ಪೊಲೀಸರು ಹಾಗೂ ಈಜುಗಾರರಿಗೆ ಮಾಹಿತಿ ನೀಡಿದ್ದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಈಜುಗಾರರ ಸಹಾಯದಿಂದ ಇದುವರೆಗೂ ಮೂರು ಮಕ್ಕಳ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಉಳಿದ ಮೂರು ಶವಗಳ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಲಾಗಿದೆ. ಪತ್ತೆಯಾದ ಮೂರು ಶವಗಳನ್ನು ಕಾನ್ಪುರದ ಹಾಲ್ಲೆಟ್ ಆಸ್ಪತ್ರೆಗೆ ರವಾನಿಸಲಾಗಿದೆ.

ಕಾರ್ಯಾಚರಣೆಗಾಗಿ ನುರಿತ ಈಜುಗಾರರು ಮತ್ತು ಸಾಕಷ್ಟು ಬೋಟ್ ಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಕರ್ನಲ್ ಗಂಜ್ ನ ವೃತ್ತ ಅಧಿಕಾರಿ ಮನೋಜ್ ಗುಪ್ತಾ ತಿಳಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: