ಕರ್ನಾಟಕಕ್ರೀಡೆ

ಏಷ್ಯನ್ ಗೇಮ್ಸ್ ಕಬಡ್ಡಿಯಲ್ಲಿ ಸ್ಥಾನಗಿಟ್ಟಿಸಿದ ಕರ್ನಾಟಕದ ಉಷಾ ರಾಣಿ

ಬೆಂಗಳೂರು,ಜು.9-ಜಕಾರ್ತದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಗೆ ಭಾರತ ಮಹಿಳಾ ಕಬಡ್ಡಿ ತಂಡಕ್ಕೆ ಕರ್ನಾಟಕದ ಕಬಡ್ಡಿ ಆಟಗಾರ್ತಿ ಉಷಾ ರಾಣಿ ಆಯ್ಕೆಯಾಗಿದ್ದಾರೆ.

ಆ ಮೂಲಕ ಏಷ್ಯನ್ ಗೇಮ್ಸ್ ಗೆ ಆಯ್ಕೆಯಾದ ರಾಜ್ಯದ ಏಕೈಕ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಉಷಾ ರಾಣಿ ಏಷ್ಯನ್ ಗೇಮ್ಸ್ ಗೆ ಆಯ್ಕೆಯಾಗಿರುವುದನ್ನು ಅವರ ಕೋಚ್ ಜಗದೀಶ್ ತಿಳಿಸಿದ್ದಾರೆ.

ಭಾರತ ಕಬಡ್ಡಿ ಸಂಸ್ಥೆ ಭಾನುವಾರ 12 ಆಟಗಾರ್ತಿಯರ ಭಾರತ ತಂಡವನ್ನು ಪ್ರಕಟಿಸಿದೆ. ಮಹಿಳಾ ತಂಡದ ಕೋಚ್ ಆಗಿ ರಾಜ್ಯದ ತೇಜಸ್ವಿನಿ ಬಾಯಿ ನೇಮಕಗೊಂಡಿದ್ದಾರೆ. ಸದ್ಯ ಕೋಚ್ ಬಲಾವನ್ ಸಿಂಗ್ ಮಾರ್ಗದರ್ಶನದಲ್ಲಿ ಮಹಿಳಾ ಕಬಡ್ಡಿ ತಂಡ ಶಿಬಿರದಲ್ಲಿ ಕಠಿಣ ಅಭ್ಯಾಸದಲ್ಲಿ ನಿರತವಾಗಿದೆ. ಇನ್ನು ಪುರುಷರ ತಂಡದಲ್ಲಿ ರಾಜ್ಯದ ಯಾವ ಆಟಗಾರನಿಗೂ ಸ್ಥಾನ ಸಿಕ್ಕಿಲ್ಲ ಎನ್ನಲಾಗಿದೆ. (ಎಂ.ಎನ್)

Leave a Reply

comments

Related Articles

error: