ಪ್ರಮುಖ ಸುದ್ದಿ

ಶಾಸನಗಳ ಮೂಲಕ ರೂಪಿಸಿದ ಕಾನೂನುಗಳಿಂದ ಮಾನವ ಹಕ್ಕುಗಳ ಸಂರಕ್ಷಣೆ ಸಾಧ್ಯ ಎನ್ನುವುದು ಕೇವಲ ಭ್ರಮೆ : ಎಸ್.ಆರ್. ನಾಯಕ್

ರಾಜ್ಯ( ಬೆಂಗಳೂರು), ಜು. 9:- ಶಾಸನಗಳ ಮೂಲಕ ರೂಪಿಸಿದ ಕಾನೂನುಗಳಿಂದ ಮಾನವ ಹಕ್ಕುಗಳ ಸಂರಕ್ಷಣೆ ಸಾಧ್ಯ ಎನ್ನುವುದು ಕೇವಲ ಭ್ರಮೆ ಎಂದು ಕರ್ನಾಟಕ ಕಾನೂನು ಆಯೋಗ ಅಧ್ಯಕ್ಷ ಹಾಗೂ ನಾಡೋಜ ನ್ಯಾಯಮೂರ್ತಿ ಎಸ್.ಆರ್. ನಾಯಕ್ ಅಭಿಪ್ರಾಯಪಟ್ಟರು.

ಮಾನವ ಹಕ್ಕುಗಳ ರಕ್ಷಣಾ ಸಮಿತಿ ವತಿಯಿಂದ ಮಾನವ ಹಕ್ಕಿನ ಇಂದಿನ ಸ್ಥಿತಿಗತಿ ಕುರಿತಂತೆ ಶರಣ ಸಾಹಿತ್ಯ ಪರಿಷತ್‌ನಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ಕೇವಲ ಕಾನೂನುಗಳಿಂದ ಮಾನವ ಸಂರಕ್ಷಣೆ ಸಾಧ್ಯವಿಲ್ಲ. ಪ್ರಾಮಾಣಿಕವಾಗಿ ನಾವು ಶ್ರಮಿಸಿದರೆ ಮಾತ್ರ ಮಾನವ ಹಕ್ಕುಗಳನ್ನು ರಕ್ಷಣೆ ಮಾಡಬಹುದು. ಪ್ರತಿನಿತ್ಯ, ಪ್ರತಿಕ್ಷಣ ಮಾನವ ಹಕ್ಕುಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಹೋರಾಡಬೇಕು ಎಂದು ಅವರು ಕರೆ ನೀಡಿದರು.ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಾನವ ಹಕ್ಕುಗಳ ಸಂರಕ್ಷಣೆಗೆ ಜನತೆ ಜಾಗೃತರಾಗಬೇಕು. ಆಗ ಮಾತ್ರ ಇಡೀ ರಾಜ್ಯದಲ್ಲಿ ಮಾನವ ಹಕ್ಕುಗಳ ರಕ್ಷಣೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬಹುದು ಎಂದರು.

ವೇದಿಕೆಯಲ್ಲಿ ನಿವೃತ್ತ ಉಪಲೋಕಾಯುಕ್ತ ಚಂದ್ರಶೇಖರಯ್ಯ, ಹಿರಿಯ ಸಾಹಿತಿ ಪುಸ್ತಕಮನೆ ಹರಿಪ್ರಿಯಾ, ಅರ್ಥಶಾಸ್ತ್ರಜ್ಞ ಡಾ. ಕೇಶವ್, ಕಾನೂನು ಸಲಹೆಗಾರರಾದ ಸೂರ್ಯ ಮುಕುಂದರಾಜ್, ಮಾನವ ಹಕ್ಕುಗಳ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: