ಮೈಸೂರು

ಮೃಗಾಲಯ ನೌಕರರ ಅಮಾನತಿಗೆ ಖಂಡನೆ: ಎರಡನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

ನಗರದ ಮೃಗಾಲಯದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಅಮಾನತು ಮತ್ತು ಪ್ರಾಣಿಗಳ ಸರಣಿ ಸಾವಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬುಧವಾರದಂದು ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಅಮಾನತುಗೊಂಡಿರುವ ಐವರು ನೌಕರರು ಕೈಗೊಂಡಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ಎರಡನೇ ದಿನವೂ ಮುಂದುವರಿಯಿತು.

ಮೈಸೂರು ವಿಭಾಗೀಯ ರಾಜ್ಯ ಮತ್ತು ಕೇಂದ್ರ ಸರಕಾರಿ, ಅರೆ ಸರಕಾರಿ ಹಾಗೂ ಅನುದಾನಿತ ಸಂಸ್ಥೆಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಧಿಕಾರಿಗಳ ನೌಕರರ ಪರಿಷತ್ ಆಶ್ರಯದಲ್ಲಿ ಅವರು ಪ್ರತಿಭಟನೆ ಆರಂಭಿಸಿದ್ದಾರೆ.

ಮೃಗಾಲಯದಲ್ಲಿ ನಡೆಯುವ ಸರಣಿ ಸಾವನ್ನು ತಪ್ಪಿಸಲು ಕಮಲಾ ಅವರನ್ನು ಕೂಡಲೇ ವರ್ಗಾಯಿಸಿ, ಬೇರೊಬ್ಬ ಅನುಭವಿ, ದಕ್ಷ ಹಾಗೂ ಸೃಜನಶೀಲ ಭಾವನೆ ಹೊಂದಿರುವವರನ್ನು ನೇಮಿಸಿ ಇತಿಹಾಸ ಪ್ರಸಿದ್ಧ ಮೃಗಾಲಯ ಉಳಿಸಿ. ಅಮಾಯಕ ನೌಕರ ವರ್ಗಕ್ಕೆ ನೈಸರ್ಗಿಕ ನ್ಯಾಯ ಒದಗಿಸಿ, ಅಮಾನತುಗೊಂಡ ನೌಕರರನ್ನು ಮರು ನೇಮಕ ಮಾಡಿಕೊಳ್ಳಿ ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.

Leave a Reply

comments

Related Articles

error: