ಮೈಸೂರು

ಮೈಸೂರು ಕೋರ್ಟ್‍ಗೆ ರಾಷ್ಟ್ರೀಯ ಮತ್ತು ರಾಜ್ಯ ಭದ್ರತಾ ತಂಡ ಭೇಟಿ

ರಾಷ್ಟ್ರೀಯ ಭದ್ರತಾ ಪಡೆ (ಎನ್‍.ಎಸ್‍.ಜಿ) ಮತ್ತು ರಾಜ್ಯದ ಭದ್ರತಾ ಪಡೆ ಈ ಎರಡು ತಂಡಗಳು ಗುರುವಾರದಂದು ಮೈಸೂರು ಕೋರ್ಟ್ ಆವರಣಕ್ಕೆ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿದವು.

ಆ.1ರಂದು ಮೈಸೂರು ಕೋರ್ಟ್ ಆವರಣದಲ್ಲಿ ನಡೆದಿದ್ದ ಕಚ್ಚಾ ಬಾಂಬ್‍ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಈ ತಂಡಗಳು ಭೇಟಿ ನೀಡಿ ನ್ಯಾಯಾಲಯದ ಆವರಣ ಮತ್ತು ಸುತ್ತಮುತ್ತ ಭದ್ರತೆ ಯಾವ ರೀತಿ ಇದೆ ಎಂಬುದನ್ನು ಪರಿಶೀಲಿಸಿತು. ಮೂಲೆ ಮೂಲೆಯನ್ನೂ ತಡಕಾಡಿ ಲೋಪದೋಷಗಳನ್ನು ಹುಡುಕಿ, ಭದ್ರತೆಯನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ನೀಡಲಿದೆ.

ಎ.ಸಿ.ಪಿ ಮಲ್ಲಿಕ್, ರಾಷ್ಟ್ರೀಯ ಭದ್ರತಾ ಮತ್ತು ತನಿಖಾ ದಳದ ಇನ್ಸ್‍ಪೆಕ್ಟರ್ ಗೋಪಾಲಕೃಷ್ಣ ಒಳಗೊಂಡಂತೆ 6 ಜನರ ತಂಡ ಭೇಟಿ ನೀಡಿತ್ತು.

Leave a Reply

comments

Related Articles

error: