ಮೈಸೂರು

ತುಂಬಿ ಹರಿದ ಕಪಿಲಾ ನದಿ : ಸ್ನಾನ ಘಟ್ಟ ಮುಳುಗಡೆ

ಮೈಸೂರು,ಜು.10:- ದಕ್ಷಿಣ ಕಾಶಿ ನಂಜನಗೂಡಿನ ಕಪಿಲಾನದಿಯು ತುಂಬಿ ಹರಿಯುತ್ತಿದ್ದು, ಕಳೆದ ವಾರ ನೀರಿನ ಪ್ರಮಾಣ ಈ ದಿನಕ್ಕಿಂತ ಹೆಚ್ಚಾಗಿದ್ದು, ಹೆಚ್ಚಾಗಿ ಜಲಾಶಯದಿಂದ ಹೊರ ಬಿಟ್ಟ ನೀರಿನ ಹರಿವು ಜಾಸ್ತಿಯಾಗಿದೆ. ಇಂದು ಸ್ನಾನ ಘಟ್ಟ ಸಂಪೂರ್ಣ ಮುಳುಗಡೆಯಾಗಿದೆ.

ಈ ಸಂದರ್ಭವಾಗಿ ಪೊಲೀಸ್ ಇಲಾಖೆ ಮುಂಜಾಗ್ರತೆಯಲ್ಲಿ ಸ್ನಾನಘಟ್ಟದ ಸುತ್ತಲೂ ಹಗ್ಗಗಳಿಂದ ಕೋಟೆ ನಿರ್ಮಿಸಿದ್ದಾರಲ್ಲದೇ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. 16ಕಾಲುಗಳ ಮಂಟಪದ ಕುತ್ತಿಗೆ ಕೂಡ ನೀರಿನಿಂದ ಆವೃತವಾಗಿದೆ. ದೊಡ್ಡ ಸೇತುವೆಯ ಹಳೇ ರೈಲ್ ಬಿಡ್ಜ್ ಕೂಡ ನೀರಿನಿಂದ ತುಂಬಿ ಹರಿಯುತ್ತಿದೆ. ಪರಶುರಾಮ ಕ್ಷೇತ್ರದ ದೇವಸ್ಥಾನದ ಕಜ್ಜಿ ಕೊಳ, ಮತ್ತು ಗದ್ದೆಯಲ್ಲಿ ನದಿ ನೀರು ಆವರಿಸಿತ್ತು, ಇಂದು ಕಬಿನಿ ಜಲಾಶಯದಲ್ಲಿ 46.856 ಕ್ಯೂಸೆಕ್ಸ್ ಹರಿಬಿಟ್ಟಿರುವುದರಿಂದ, ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿರುವ ಕಾರಣ ಕಪಿಲಾನದಿಯು ತುಂಬಿ ಹರಿಯುತ್ತಿದೆ. ನದಿಯ ಅಂಚಿನಲ್ಲಿರುವ ಗ್ರಾಮಗಳಿಗೆ ತಹಶೀಲ್ದಾರ್ ದಯಾನಂದ್ ಮುಂಜಾಗ್ರತೆಯ ಕಾರ್ಯಕ್ರಮವಾಗಿ ಆರ್.ಐ.ಗಳು, ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಮೂಲಕ ಸ್ಥಳಗಳಿಗೆ ತೆರಳಿ ಜನರಿಗೆ ಸ್ಥಳವನ್ನು ತೆರವು ಮಾಡಿಸಲು ಹರಸಾಹಸ ಪಡುತ್ತಿದ್ದಾರೆ. ಮುಂದಿನ ಕೆಲ ಗಂಟೆಯಲ್ಲಿ ಇನ್ನೂ ಹೆಚ್ಚು ನೀರನ್ನು ಹೊರ ಬಿಡುವ ಸೂಚನೆಯಿದ್ದು, ಪೊಲೀಸ್ ಇಲಾಖೆಯ ಸಹಕಾರದಿಂದ ಗ್ರಾಮಸ್ಥರಿಗೆ ತಿಳುವಳಿಕೆ ನೀಡಿ ಬಿಗು-ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: