ದೇಶ

ಹೆದ್ದಾರಿಗಳಲ್ಲಿ ಮದ್ಯದಂಗಡಿ ನಿರ್ಬಂಧ

ಮದ್ಯಪ್ರಿಯರಿಗೊಂದು ಶಾಕಿಂಗ್ ನ್ಯೂಸ್,  ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿರುವ ಮದ್ಯದಂಗಡಿಗಳನ್ನು ತೆರವುಗೊಳಿಸಿ ಹಾಗೂ ಹೊಸ ಅಂಗಡಿಗಳಿಗೆ ಪರವಾನಿಗೆ ನೀಡಬೇಡಿ ಎಂದು ಇಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.

ಕುಡಿದು ವಾಹನ ಚಾಲಯಿಸುವುದರಿಂದ ರಸ್ತೆ ಅಪಘಾತಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್‍ ಪ್ರಸ್ತುತ ಇರುವ ಮದ್ಯದಂಗಡಿಗಳನ್ನು ಏಪ್ರಿಲ್ 1,2018ರೊಳಗೆ ತೆರವುಗೊಳಿಸಬೇಕೆಂದು ಕಟ್ಟುನಿಟ್ಟಿನ ಆದೇಶ ನೀಡಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಹೆದ್ದಾರಿಗಳಲ್ಲಿ ಹೊಸದಾಗಿ ಮದ್ಯದಂಗಡಿಗಳನ್ನು ತೆರೆಯಲು ಪರವಾನಿಗೆ ನೀಡಬಾರದೆಂದು ಆದೇಶಿಸಿದೆ.

ಕುಡಿದು ವಾಹನ ಚಲಾಯಿಸುವುದರಿಂದ ಅಪಘಾತಗಳ ಪ್ರಮಾಣ ಹೆಚ್ಚಾಗಿದ್ದು ದೇಶದಲ್ಲಿ ಕಳೆದ 5 ವರ್ಷಗಳಲ್ಲಿಯೇ 1.18 ಲಕ್ಷ ಅಪಘಾತಗಳಿಗೆ ಕುಡಿತದ ಅಮಲೇ ಕಾರಣವೆಂದು ವೈದ್ಯಕೀಯ ಪರೀಕ್ಷೆಗಳು ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಮದ್ಯದಂಗಡಿಗಳು ಹೆದ್ದಾರಿಯಿಂದ 500 ಮೀಟರ್ ದೂರವಿರಬೇಕೆಂದು ಸುಪ್ರೀಂ ಕೋರ್ಟ್‍ ನಿರ್ದೇಶನ ನೀಡಿದೆ.

 

Leave a Reply

comments

Related Articles

error: