ಪ್ರಮುಖ ಸುದ್ದಿಮೈಸೂರು

ಇಂದಿನಿಂದ 2 ದಿನ ಮೈಸೂರಿನಲ್ಲಿ, 2 ದಿನ ಕೊಡಗು,2 ದಿನ ಮಂಗಳೂರಿನಲ್ಲಿ ಕೇಂದ್ರ ಆರ್ಥಿಕ ಸ್ಥಾಯಿ ಸಮಿತಿ ಪ್ರವಾಸ : ಎಂ.ವೀರಪ್ಪ ಮೊಯ್ಲಿ

ಮೈಸೂರು,ಜು.11:- ಇಂದಿನಿಂದ 2 ದಿನ ಮೈಸೂರಿನಲ್ಲಿ,  2 ದಿನ ಕೊಡಗು,2 ದಿನ ಮಂಗಳೂರಿನಲ್ಲಿ ಕೇಂದ್ರ ಆರ್ಥಿಕ ಸ್ಥಾಯಿ ಸಮಿತಿ ಪ್ರವಾಸ ನಡೆಸಲಿದೆ ಎಂದು ಮಾಜಿ ಮುಖ್ಯ ಮಂತ್ರಿ,ಕೇಂದ್ರ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ  ಎಂ.ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದ ಆರ್ಥಿಕ ಸುಧಾರಣೆ, ಬ್ಯಾಂಕ್ ಸಮಸ್ಯೆ, ಜಿಎಸ್. ಟಿ ಯಿಂದ ಉಂಟಾದ ಸಮಸ್ಯೆಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.ದೇಶಕ್ಕೆ ಜಿ.ಎಸ್.ಟಿ. ಅನಿವಾರ್ಯ, ಎಂದು ನಾನು ಬೆಂಬಲಿಸಿದ್ದೆ. ಆದರೆ ಜಿ.ಎಸ್.ಟಿ. ಯಿಂದ ಸಣ್ಣ ಕೈಗಾರಿಕೆಗಳಿಗೆ ತೊಂದರೆ ಎನ್ನುವ ಆರೋಪ ಇದೆ. ಜಿಎಸ್.ಟಿ. ಯಿಂದ  ಅನೇಕ ಸಮಸ್ಯೆ ಉದ್ಭವವಾಗಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆ, ಇಳಿಕೆ ಬಗ್ಗೆ ಚರ್ಚೆ ಮಾಡಲ್ಲ. ಟ್ಯಾಕ್ಸ್, ಎಕ್ಸೈಜ್ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು. ಕೊಡಗಿನಲ್ಲಿ ಕಾಫಿ ಉದ್ಯಮದ ಬಗ್ಗೆ ಚರ್ಚೆ ನಡೆಯಲಿದೆ. ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆ, ನ್ಯಾಷನಲ್ ಹೈವೆ, ಬಂಡವಾಳ,  ಮಂಗಳೂರು ಉದ್ಯಮದ ಬಗ್ಗೆ ಚರ್ಚೆ ನಡೆಯಲಿದೆ. ಬ್ಯಾಂಕಿಗ್ ಸುಧಾರಣೆ ಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಿಲ್ಲ ಅಂದರೆ ರಾಜ್ಯ ಸರ್ಕಾರ ಸಾಲ ಮನ್ನಾ ಮಾಡೋದು ಅನಿವಾರ್ಯ. ರೈತರ ಸಾಲದ ಬಗ್ಗೆ ಕೇಂದ್ರ ಆರ್ಥಿಕ ಸ್ಥಾಯಿ ಸಮಿತಿ ಚಿಂತನೆ ನಡೆಸಲಿದೆ. ಸಾಲದ ಬಗ್ಗೆ ಕೇಂದ್ರ,ರಾಜ್ಯ  ಸರ್ಕಾರದ ಜವಾಬ್ದಾರಿ ಬಗ್ಗೆ ಶೀಘ್ರ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು. ಬ್ಯಾಂಕ್ ವಂಚನೆ ಬಗ್ಗೆಯೂ ಚಿಂತನೆ ನಡೆದಿದೆ. ಶ್ರೀಮಂತ ಉದ್ಯಮಿಗಳಿಗೆ ಕೇಂದ್ರ ಸಾಲ ಮನ್ನಾ ಮಾಡಿದೆ. ರೈತರ ಸಾಲದ ಬಗ್ಗೆ ಕೇಂದ್ರ ಯಾವುದೇ ಮಾತನಾಡಿಲ್ಲ. ಹೀಗಾಗಿ ಸಮಿತಿಯಿಂದ ಈ ಬಾರಿಯ ಲೋಕಸಭಾ  ಅಧಿವೇಶನಕ್ಕೆ  ವರದಿ ಸಲ್ಲಿಕೆಯಾಗಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ವಾಸು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: