ಮೈಸೂರು

ಕಬಿನಿ ನದಿಯಲ್ಲಿ ಈಜಲು ಧುಮುಕಿದ್ದ ಓರ್ವ ನಾಪತ್ತೆ

ಮೈಸೂರು,ಜು.11:- ಕಬಿನಿ ಜಲಾಶಯದಿಂದ ಹೊರಹರಿವು ಹೆಚ್ಚಳ ಹಿನ್ನೆಲೆ ತುಂಬಿದ ಕಬಿನಿ ನದಿಯಲ್ಲಿ ಈಜಲು ಧುಮುಕಿದ್ದ ಓರ್ವ ನಾಪತ್ತೆಯಾಗಿದ್ದಾನೆ.

ಮೈಸೂರಿನ ನಂಜನಗೂಡು ಪಟ್ಟಣ ಬಳಿಯ ಕಬಿನಿ ನದಿ ದಡದಲ್ಲಿ ಘಟನೆ ನಡೆದಿದ್ದು, ರೈಲ್ವೆ ಸೇತುವೆ ಮೇಲಿಂದ ಧುಮುಕಿ ಈಜಾಡಲು ನಾಲ್ವರು ಯುವಕರು ಮುಂದಾಗಿದ್ದರು. ಮೂವರು ಯುವಕರು ಈಜಿ ದಡ ಸೇರಿದರೆ ಓರ್ವ ನಾಪತ್ತೆಯಾಗಿದ್ದಾನೆ. ಮುಸಾಫಿರ್ ಶರೀಫ್ ಎಂಬಾತ ನಾಪತ್ತೆಯಾಗಿದ್ದು, ಯುವಕರ ತಂಡ ಸೇತು ಮೇಲಿಂದ ಧುಮುಕಿ ಈಜಾಡುತ್ತಿತ್ತು. ಮುಸಾಫಿರ್ ಶರೀಫ್ ನದಿ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ ಎನ್ನಲಾಗಿದ್ದು, ನಾಪತ್ತೆಯಾಗಿರುವ ಮುಸಾಫಿರ್ ಶರೀಫ್‌ಗಾಗಿ ಶೋಧ ಕಾರ್ಯ ನಡೆಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಈಜು ತಜ್ಞರು ಮುಸಾಫಿರ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಯುವಕರ ತಂಡ ಪ್ರತಿ ವರ್ಷ ಮಳೆಗಾಲದಲ್ಲಿ ಈಜಾಡುವ ಸಾಹಸ ಮಾಡುತ್ತಿತ್ತು. ದುಸ್ಸಾಹಸ ಮಾಡಲು ಹೋಗಿ ಮುಸಾಫಿರ್ ನಾಪತ್ತೆಯಾಗಿದ್ದು, ಸ್ಥಳಕ್ಕೆ ನಂಜನಗೂಡು ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: