ಮೈಸೂರು

ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಬೀಡಿ/ಸಿಗರೇಟ್ ಅಂಗಡಿ : ತೆರವುಗೊಳಿಸಿದ ಪಾಲಿಕೆ ಅಧಿಕಾರಿಗಳು

ಮೈಸೂರು, ಜು.11:-  ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ 2ಕ್ಕೆ ಸೇರಿದ ಬಲ್ಲಾಳ್ ವೃತ್ತದ ಬಳಿ ಜಯನಗರಕ್ಕೆ ಹೋಗುವ ದಾರಿಯಲ್ಲಿ ನಗರ ಬಸ್ ಸ್ಟಾಪ್ ಪಕ್ಕದಲ್ಲೇ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಬೀಡಿ/ಸಿಗರೇಟ್ ಅಂಗಡಿ ಇಟ್ಟು ಸಾರ್ವಜನಿಕರಿಗೆ ತೊಂದರೆಯಾಗಿದ್ದ ಸ್ಥಳವನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು.

ಈ ಅಂಗಡಿ ತೆರೆದಿದ್ದಾಗ ಧೂಮಪಾನ ಮಾಡುವವರು ರಸ್ತೆ ಬದಿಯಲ್ಲೇ ಧೂಮಪಾನ ಮಾಡಿ ಬಸ್ ಸ್ಟಾಪ್ ನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಹಿರಿಯ ನಾಗರೀಕರಿಗೆ ಹಾಗೂ ಮಹಿಳೆಯರಿಗೆ ಮುಜುಗರವಾಗುತ್ತಿತ್ತು. ಎಷ್ಟೋ ಮಂದಿ ಹೇಳಿಕೊಳ್ಳದೆ ನೋವನ್ನು ಅನುಭವಿಸಿದ ಘಟನೆಗಳು ಕೂಡ ನಡೆದಿದೆ. ಈ ಜಾಗವನ್ನು ತೆರವುಗೊಳಿಸಿ ಹೆಣ್ಣು ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಕಿಡಿಗೇಡಿಗಳು ತೊಂದರೆಗಳು ನೀಡುತ್ತಿರುವುದನ್ನು ತಪ್ಪಸಿದಂತಾಗಿದೆ. ವಿಷಯಗಳನ್ನೆಲ್ಲ ಪಾಲಿಕೆ ಆಯುಕ್ತ ಕೆ.ಹೆಚ್ ಜಗದೀಶ್ ಹಾಗೂ ವಲಯ 2ರ ಸಹಾಯಕ ಆಯುಕ್ತರಾದ ಜವರೇಗೌಡರವರ ಗಮನಕ್ಕೆ ತಂದು ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆಗಳನ್ನು ಫೋಟೋ ಸಮೇತ ತಿಳಿಸಿದಾಗ, ಎಚ್ಚೆತ್ತ ಅಧಿಕಾರಿಗಳು ಈ ಅಂಗಡಿಯನ್ನು ತೆರವುಗೊಳಿಸಿದ್ದು, ಈಗ ಈ ಸ್ಥಳ ವಿಶಾಲವಾಗಿದೆ.

ನಗರ ಪಾಲಿಕೆ ಅಧಿಕಾರಿಗಳು ಅಂಗಡಿಯನ್ನು ತೆರವುಗೊಳಿಸಿ ಮಾಲೀಕನಿಗೆ ಎಚ್ಚರಿಸಿದ್ದರೂ ಭಂಡ ಧೈರ್ಯದಿಂದ ಟೇಬಲ್ ಇಟ್ಟು ವ್ಯಾಪಾರ ಮಾಡುತ್ತಿದ್ದಾನೆ. ಈತನಿಗೆ ಸಾರ್ವಜನಿಕರ ಆರೋಗ್ಯ ಮತ್ತು ತೊಂದರೆಗಳಿಗಿಂತ ವ್ಯಾಪಾರವೇ ಮುಖ್ಯವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: