ಕರ್ನಾಟಕ

ಪರವಾನಗಿ ಇಲ್ಲದೆ ಔಷಧಿ ಮಾರಾಟ ಕಂಡುಬಂದಲ್ಲಿ ಕಠಿಣ ಕ್ರಮದ ಎಚ್ಚರಿಕೆ

ಹಾಸನ (ಜುಲೈ 11): ಹಾಸನ ಜಿಲ್ಲೆಯಲ್ಲಿ ಶುಂಠಿ, ತಂಬಾಕು, ಮೆಣಸಿನ/ಕರಿಮೆಣಸಿನ ಬೆಳೆಗೆ ಕೀಟನಾಶಕ/ ಕಳೆನಾಶಕ/ಸಸ್ಯ ಉತ್ತೇಜಕ ಗೊಬ್ಬರ/ಬಿತ್ತನೆ ಬೀಜಗಳನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ರೈತರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ಕೀಟನಾಶಕ ಕಾಯ್ದೆ 1968, ರಸಗೊಬ್ಬರ ಕಾಯ್ದೆ 1985 ಮತ್ತು ಬಿತ್ತನೆ ಬೀಜ ಕಾಯ್ದೆ 1966ರಡಿ ಪರವಾನಗಿ ಇಲ್ಲದೆ ಕೀಟನಾಶಕ/ರಸಗೊಬ್ಬರ/ಬಿತ್ತನೆ ಬೀಜವನ್ನು ರೈತರ ಮನೆ ಬಾಗಿಲಿಗೆ ಮಾರಾಟ ಮಾಡುವುದು ಕಾನುನು ಕಾಯ್ದೆಯಡಿ ನಿಷೇಧಿಸಲಾಗಿದೆ.

ಕೆಲವೊಂದು ಕಂಪನಿಯವರು ರೈತರಿಗೆ ಆಮಿಷ ಒಡ್ಡಿ ರೈತರ ಮನೆ ಬಾಗಿಲಿಗೆ ವಾಹನಗಳಲ್ಲಿ ತೆರಳಿ ಮಾರಾಟ ಮಾಡಲಾಗುತ್ತಿರುವುದು ಕಂಡು ಬಂದಿದ್ದು, ಇದು ಕಾನೂನು ಉಲ್ಲಂಘನೆ ಮಾಡಿದಂತಾಗಿರುತ್ತದೆ. ಈ ಕಂಪನಿಗಳು ಯಾವುದೇ ರೀತಿಯ ಪರವಾನಗಿಯನ್ನು ಜಿಲ್ಲೆ ಪರವಾನಗಿ ಅಧಿಕಾರಿಯಿಂದ ಪಡೆಯದೆ ಇರುವುದರಿಂದ ರೈತರು ಅವರು ನೀಡಿದ ಔಷಧ/ ಗೊಬ್ಬರವನ್ನು ಖರೀದಿಸದಿರಲು ಕೋರಲಾಗಿದೆ.

ಜಿಲ್ಲೆಯಲ್ಲಿ ಈ ರೀತಿಯಲ್ಲಿ ಅನಧೀಕೃತವಾಗಿ ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರ/ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಮಾಹಿತಿಯನ್ನು ನೀಡಬೇಕಾಗಿ ಪ್ರಕಟಣೆಯಲ್ಲಿ ಜಂಟಿ ಕೃಷಿ ನಿರ್ದೇಶಕರು, ರೈತರಲ್ಲಿ ಮನವಿ ಮಾಡಿದ್ದಾರೆ. (ಎನ್.ಬಿ)

Leave a Reply

comments

Related Articles

error: