ಮೈಸೂರು

ಎರಡು ದ್ವಿಚಕ್ರವಾಹನಗಳ ನಡುವೆ ಅಪಘಾತ : ವ್ಯಕ್ತಿ ಸಾವು

ಮೈಸೂರು,ಜು.11:- ಎರಡು ದ್ವಿಚಕ್ರವಾಹನಗಳ ನಡುವೆ ಸಂಭವಿಸಿದ ಅಪಘಾತದಿಂದ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಟಿ.ನರಸೀಪುರ ತಾಲೂಕಿನ ವೀರಪ್ಪ ಒಡೆಯರಹುಂಡಿ ಗ್ರಾಮದ ಬಳಿ ನಡೆದಿದೆ.

ಮೃತರನ್ನು ಚಿಕ್ಕಬೂವಹಳ್ಳಿ ಗ್ರಾಮದ ಬಸರಾಜಪ್ಪ (70) ಎಂದು ಗುರುತಿಸಲಾಗಿದ್ದು, ಪತ್ನಿ ಶಾರದಮ್ಮ(60) ಗಂಭೀರ ಗಾಯಗೊಂಡಿದ್ದಾರೆ.  ಸೋಸಲೆ ತೋಪಿನ ಮಠದಲ್ಲಿ ನಡೆಯುತ್ತಿದ್ದ ಮದುವೆಗೆ ಬರುವಾಗ ದುರ್ಘಟನೆ ಸಂಭವಿಸಿದ. ಗಾಯಗೊಂಡ ಶಾರದಮ್ಮ ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.ಟಿ.ನರಸೀಪುರ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್).

Leave a Reply

comments

Related Articles

error: