
ದೇಶ
ಪತಂಜಲಿ ಸಂಸ್ಥೆ ವಸ್ತುಗಳ ಕಳಪೆ ಗುಣಮಟ್ಟ : 11 ಲಕ ರೂ ದಂಡ
ಯೋಗಗುರು ಬಾಬಾ ರಾಮ್ದೇವ್ ಅವರ ಪತಂಜಲಿ ಆಯುರ್ವೇದ್ ಲಿಮಿಟೆಡ್ ಸಂಸ್ಥೆಯ ಉತ್ಪನ್ನಗಳ ಬಗ್ಗೆ ಸುಳ್ಳು ಜಾಹೀರಾತು ನೀಡಿ ಗ್ರಾಹಕರನ್ನು ವಂಚಿಸುತ್ತಿದೆ ಎನ್ನುವ ಆರೋಪದ ವಿಚಾರಣೆ ನಡೆಸಿದ ಹರಿದ್ವಾರ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ 11 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಸಂಸ್ಥೇಯ ಜೇನುತುಪ್ಪ, ಸಾಸಿವೆ ಎಣ್ಣೆ, ಜಾಮ್, ಉಪ್ಪು, ಕಡಲೆಹಿಟ್ಟು ಸೇರಿದಂತೆ ಪತಂಜಲಿ ಉತ್ಪನ್ನಗಳ ಗುಣಮಟ್ಟದ ಪರೀಕ್ಷೆಯಲ್ಲಿ ಫೇಲಾಗಿದ್ದ ಹಿನ್ನೆಲೆಯಲ್ಲಿ ಕೋರ್ಟ್ ದಂಡ ವಿಧಿಸಿದೆ.
ಪತಂಜಲಿ ಸಂಸ್ಥೆ ಬೇರೆ ಸಂಸ್ಥೇಗಳ ತಯಾರಿಸುತ್ತಿರುವ ಉತ್ಪನ್ನಗಳ ಮೇಲೆ ತನ್ನ ಲೇಬಲ್ ಹಾಕಿ ಮಾರಾಟ ಮಾಡುತ್ತಿರುವುದು ಬೆಳಕಿ ಬಂದಿದೆ.
ಉತ್ತರಾಖಂಡ್ನ ರುದ್ರಪುರ್ನಲ್ಲಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್.ಎಸ್.ಎಸ್.ಎಐ) ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರೀಕ್ಷೆ ನಡೆಸಿತ್ತು. 2012ರಲ್ಲಿಯೇ ಸಂಸ್ಥೆಯ ವಿರುದ್ದ ಪ್ರಕರಣ ದಾಖಲಾಗಿತ್ತು. ಅಂದಿನಿಂದಲೂ ವಿಚಾರಣೆ ನಡೆದಿತ್ತು ಅಂತಿಮವಾಗಿ ಡಿ.1ರಂದು ತೀರ್ಪು ನೀಡಿದ್ದು. ಮುಂದಿನ ದಿನಗಳಲ್ಲಿ ಸಂಸ್ಥೆಯ ಉತ್ಪನ್ನಗಳಲ್ಲಿ ಗುಣಮಟ್ಟ ಸುಧಾರಣೆ ಬರದಿದ್ದರೆ ಕ್ರಮ ಜರುಗಿಸಲಾಗುವುದು ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.
ಪ್ರಸ್ತುತ 5 ಸಾವಿರ ಕೋಟಿ ರೂ.ಆದಾಯ ಹೊಂದಿರುವ ಪತಂಜಲಿ ಸಂಸ್ಥೆ ಮುಂದಿನ ವರ್ಷದಿಂದ ದುಪ್ಪಟ್ಟು ಮಾಡಿಕೊಳ್ಳುವ ಗುರಿಯನ್ನು ಹೊಂದಿದೆ.