ದೇಶ

ಮುಳುವಾಯ್ತು ಅತ್ಯಾಚಾರದ ಬಗ್ಗೆ ಐಎಎಸ್ ಟಾಪರ್ ಮಾಡಿದ ಟ್ವಿಟ್

ಶ್ರೀನಗರ, ಜು.11-ಐಎಎಸ್ ಟಾಪರ್ ಒಬ್ಬರು ಮಾಡಿದ ಟ್ವಿಟ್ ವೊಂದು ವೈರಲ್ ಆಗಿ ಇದೀಗ ಆ ಟ್ವಿಟ್ ಅವರಿಗೆ ಮುಳುವಾಗಿ ಪರಿಣಮಿಸಿದೆ. ಈ ಟ್ವಿಟ್ ಆಧಾರದ ಮೇಲೆ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಜಮ್ಮು ಮತ್ತು ಕಾಶ್ಮೀರ ಸರ್ಕಾರ ನಿರ್ಧರಿಸಿದೆ.

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ 2010ನೇ ಬ್ಯಾಚ್ ಐಎಎಸ್ ಟಾಪರ್ ಶಾ ಫೈಸಲ್ಮಾಡಿದ ಟ್ವಿಟ್ ಇದೀಗ ಅವರಿಗೆ ತಲೆನೋವಾಗಿದೆ. `ಪಾಪ್ಯುಲೇಶನ್ + ಪ್ಯಾರ್ಟಿಚ್ರಿ + ಇಲ್ಲಿಟರೆಸಿ + ಆಲ್ಕೊಹಾಲ್ + ಪೋರ್ನ್ + ಟೆಕ್ನಾಲಜಿ + ಅನಾರ್ಕಿ = ರೇಪಿಸ್ತಾನ್ಎಂದು ಫೈಸಲ್ ಟ್ವಿಟ್ ಮಾಡಿದ್ದರು ಎಂದು ಹೇಳಲಾಗಿದೆ.

ಅಮೆರಿಕಾದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಫೈಸಲ್ಗೆ ಸಾಮಾನ್ಯ ಆಡಳಿತ ಇಲಾಖೆ ನೀಡಿರುವ ನೋಟಿಸ್ನಲ್ಲಿ ಅಧಿಕೃತ ಕರ್ತವ್ಯವನ್ನು ನಿಭಾಯಿಸುವಲ್ಲಿ ನೀವು ಪ್ರಾಮಾಣಿಕತೆ ಮತ್ತು ವೃತ್ತಿ ನಿಷ್ಠೆಯಲ್ಲಿ ವಿಫಲರಾಗಿದ್ದೀರಿ ಎಂಬ ಆರೋಪವಿದೆ ಹಾಗೂ ಮೂಲಕ ಸಾರ್ವಜನಿಕ ಸೇವಕರಾಗಲು ಅರ್ಹರಲ್ಲ ಎನಿಸುವ ರೀತಿ ವರ್ತಿಸಿದ್ದೀರಿ ಎಂದು ಹೇಳಲಾಗಿದೆ. ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಕೋರಿದೆ ಎಂದು ನೋಟಿಸ್ ವಿವರಿಸಿದೆ.

ದಕ್ಷಿಣ ಏಷ್ಯಾದ ಅತ್ಯಾಚಾರ ಸಂಸ್ಕೃತಿ ವಿರುದ್ಧ ನಾನು ಮಾಡಿದ ಕಹಿ ಟ್ವಿಟ್ಗೆ ಮೇಲಾಧಿಕಾರಿಯಿಂದ ಪ್ರೇಮಪತ್ರ ಬಂದಿದೆ. ಸಾಮ್ರಾಜ್ಯಶಾಹಿ ಕಾಲದ ಸೇವಾ ನಿಯಮಾವಳಿಯನ್ನು ಪ್ರಜಾಪ್ರಭುತ್ವ ಆಡಳಿತದ ಆಧುನಿಕ ಭಾರತದಲ್ಲೂ ಅನ್ವಯಿಸುವ ಮೂಲಕ ನಾವು ಆತ್ಮಪ್ರಜ್ಞೆಯ ಸ್ವಾತಂತ್ರವನ್ನು ದಮನಿಸಲು ಬಳಸುತ್ತಿರುವುದು ವಿಪರ್ಯಾಸ. ನಿಯಮಾವಳಿಯ ಬದಲಾವಣೆಗೆ ಒತ್ತು ನೀಡುವ ಸಲುವಾಗಿ ನಾನು ಇದನ್ನು ಷೇರ್ ಮಾಡುತ್ತಿದ್ದೇನೆ ಎಂದು ಫೈಸಲ್ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಇಲಾಖೆಯ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಕ್ಷ ಅಧಿಕಾರಿಯನ್ನು ನಾಗರಿಕ ಸೇವಾ ಕ್ಷೇತ್ರದಿಂದ ಹೊರಹಾಕುವ ಹುನ್ನಾರ ಇದು ಎಂದು ಕಿಡಿಕಾರಿದ್ದಾರೆ. (ಎಂ.ಎನ್)

Leave a Reply

comments

Related Articles

error: