ಸುದ್ದಿ ಸಂಕ್ಷಿಪ್ತ
ಜು.13ರಂದು ಸಿಸಿಎಸ್ಎಸ್ ಸಮ್ಮೇಳನ
ಮೈಸೂರು,ಜು.11 : ಸಿ.ಎಸ್.ಐ.ಆರ್, ಸಿಎಫ್ ಟಿ ಆರ್ಐ ವಿದ್ಯಾರ್ಥಿ ಸಮ್ಮೇಳನ (ಸಿಸಿಎಸ್ಎಸ್) ‘ಜೀವಿ ವಿಜ್ಞಾನ ಸಂಶೋಧನೆಗಳ ಮುನ್ನಡೆ’ಯನ್ನು ಜು.13ರ ಬೆಳಗ್ಗೆ 9.15ಕ್ಕೆ ಸಂಸ್ಥೆಯ ಅಸೆಂಬ್ಲಿ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಸಿ.ಎಸ್.ಐ.ಆರ್., ಸಿ.ಎಫ್.ಟಿ.ಆರ್.ಐ ನಿರ್ದೇಶಕ ಜೀತೇಂದ್ರ ಜೆ ಜಾಧವ್ ಉದ್ಘಾಟಿಸಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಸಂಸ್ಥೆ ಮುಖ್ಯ ವಿಜ್ಞಾನಿ ಮತ್ತು ಸಲಹೆಗಾರ ಡಾ.ಆರ್.ಸುಬ್ರಮಣ್ಯಂ, ಎ.ಎಫ್.ಎಸ್.ಟಿ ಗೌರವ ಕಾರ್ಯದರ್ಶಿ ಡಾ.ಆಶಿತೋಷ್ ಎ ಇನಾಂದಾರ್ ಇರುವರು.
ಎಕ್ಸ್ ಪ್ಲೋರಿಂಗ್ ನ್ಯೋಟ್ರೊಫಿಲ್ಸ್ : ದ ಸೆಂಟಿನೆಲ್ಸ್ ಆಫ್ ಇನ್ನೇಟ್ ಇಮ್ಯೂನಿಟಿ ವಿಷಯವಾಗಿ ಮೈಸೂರು ವಿವಿಯ ಪ್ರೊ.ಕೆ.ಕೆಂಪರಾಜು ಉಪನ್ಯಾಸ ನೀಡುವರು. (ಕೆ.ಎಂ.ಆರ್)