ಮೈಸೂರು

ದ್ವಿ ಚಕ್ರ ವಾಹನ ಕಳ್ಳನ ಬಂಧನ : ಎರಡು ದ್ವಿ ಚಕ್ರ ವಾಹನ ವಶ

ಮೈಸೂರು,ಜು.12:-  ಮೈಸೂರು ನಗರ ಮಂಡಿ ಪೊಲೀಸರು ಕೈಲಾಸಪುರಂ ಶ್ರೀನಿವಾಸ ದೇವಸ್ಥಾನದ ರಸ್ತೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ನಂಬರ್ ಪ್ಲೇಟ್ ಇಲ್ಲದ ಬಜಾಜ್ ಕ್ಯಾಲಿಬರ್ ಬೈಕನ್ನು  ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

ಬಂಧಿತನನ್ನು ದಾವಣಗೆರೆ ಜಿಲ್ಲೆಯ ದೊಡ್ಡಬಾತಿ ನಿವಾಸಿ ನಿರಂಜನ್ ಎನ್ ಬಿನ್ ಲೇಟ್ ನಿಂಗಪ್ಪ ಬಣಕರ್( 31) ಎಂದು  ಗುರುತಿಸಲಾಗಿದ್ದು, ಈತನು ಮಂಡಿ ಪೊಲೀಸ್ ಠಾಣೆ ಹಾಗೂ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದರ ಮೇರೆಗೆ ಈತನಿಂದ 55,000ರೂ. ಮೌಲ್ಯದ 1- ಬಜಾಜ್ ಕ್ಯಾಲಿಬರ್ ಹಾಗೂ 1- ಹಿರೋ ಹೊಂಡಾ ಸ್ಲ್ಪೆಂಡರ್ ದ್ವಿ ಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತ ನಕಲಿ ಕೀ ಬಳಸಿ ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಬಗ್ಗೆ ವಿಚಾರಣೆಯಿಂದ ತಿಳಿದು ಬಂದಿದ್ದು, ಈತನ ವಿರುದ್ಧ  ಈ ಹಿಂದೆಯೂ ಸಹ ದಾವಣಗೆರೆ ಜಿಲ್ಲೆಯ ಹಲವಾಗಲು ಪೊಲೀಸ್ ಠಾಣೆಯಲ್ಲಿ ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣ ದಾಖಲಾಗಿದೆ.  ಈ ಪತ್ತೆ ಕಾರ್ಯಾಚರಣೆಯಲ್ಲಿ  ಮಂಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್  ಅನ್ಸರ್ ಅಲಿ ಎ.ಎಸ್.ಐ ಎಂ.ಬಸವರಾಜು, ಸಿಬ್ಬಂದಿಗಳಾದ ಎಸ್.ಜಯಕುಮಾರ್, ಎಂ.ಎಲಿಯಾಸ್, ಜಯಪಾಲ, ರವಿಗೌಡ ಮತ್ತು ಶಂಕರ್ ತಿ ಬಂಡಿವಡ್ಡರ್ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: