ಮೈಸೂರು

ಇನೋವಾ ಕಾರು ಹಾಗೂ ಹೋಂಡಾ ಆ್ಯಕ್ಟೀವಾ ಬೈಕ್ ನಡುವೆ ಡಿಕ್ಕಿ

ಮೈಸೂರು,ಜು.12:- ಇನೋವಾ ಕಾರು ಹಾಗೂ ಹೋಂಡಾ ಆ್ಯಕ್ಟೀವಾ ಬೈಕ್ ನಡುವೆ ಡಿಕ್ಕಿ ನಡೆದ ಪರಿಣಾಮ ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಿನ್ನೆ ಮಧ್ಯಾಹ್ನ ಬನ್ನಿ ಮಂಟಪದ ಡಾಲ್ಪಿನ್ ಬೇಕರಿ ಎದುರು ನಡೆದಿದೆ.

ನಿನ್ನೆ12:30 ರ ಸಮಯದಲ್ಲಿ ಇಬ್ಬರೂ ಯುವಕರು ಹೋಂಡಾ ಆಕ್ಟೀವಾ ಬೈಕಿನಲ್ಲಿ ಬನ್ನಿಮಂಟಪದ ಕಡೆಗೆ ವೇಗವಾಗಿ ತೆರಳುತ್ತಿದ್ದರು. ಈ ಸಂದರ್ಭ ಮುಂದಿನ ವಾಹನವನ್ನು ಹಿಂದಿಕ್ಕಲು ಯತ್ನಿಸಿದಾಗ ಎಲ್.ಐ.ಸಿ ಕಡೆಯಿಂದ ಬಂದ ಇನೋವಾ ಕಾರಿಗೆ ನೇರವಾಗಿ ಡಿಕ್ಕಿ ಹೊಡೆದರು.

ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಯುವಕರನ್ನು ತಕ್ಷಣ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಯಿತು. ಈ ಯುವಕರ ಬಗ್ಗೆ ಯಾವುದೇ ರೀತಿಯ ಮಾಹಿತಿ ತಿಳಿದು ಬಂದಿಲ್ಲ. ಎನ್. ಆರ್. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: