ಮೈಸೂರು

ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಸಿಲ್ಕ್ ಇಂಡಿಯ-2018ಕ್ಕೆ ಸಂಸದ ಪ್ರತಾಪ ಸಿಂಹ ಚಾಲನೆ

ಮೈಸೂರು,ಜು.12:- ಹಸ್ತ ಶಿಲ್ಪಿ ಸಂಸ್ಥೆ ವತಿಯಿಂದ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಸಿಲ್ಕ್ ಇಂಡಿಯ-2018ಕ್ಕೆ ನಂಜರಾಜ್ ಬಹದ್ದೂರ್ ಛತ್ರದಲ್ಲಿ  ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಚಾಲನೆ ನೀಡಿದರು.

ನಿನ್ನೆ ಸಿಲ್ಕ್ ಇಂಡಿಯಾಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿ ಹಸ್ತ ಶಿಲ್ಪಿ ಸಂಸ್ಥೆ ವತಿಯಿಂದ ವಿವಿಧ ಬಗೆಯ ಸಿಲ್ಕ್ ಸೀರೆಗಳು ಮೈಸೂರಿನಲ್ಲಿ ಒಂದೇ ಸೂರಿನಡಿ ದೊರೆಯಂತೆ ಮಾಡಿದ್ದಾರೆ. ಕಾಶ್ಮೀರದಿಂದ ಕಾಂಚಿಪುರಂ ವರಗಿನ ರೇಷ್ಮೇ ಸೀರೆಗಳು ಇಲ್ಲಿ ದೊರೆಯುತ್ತಿದೆ. 50 ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ರಾಜ್ಯದ ಸಾಂಪ್ರದಾಯಿಕ ರೇಷ್ಮೆ  ಸೀರೆಗಳನ್ನು ಮಾರಾಟ ಮಾಡುತ್ತಿದ್ದಾರೆ.ಉತ್ಪಾದಕರಿಂದ ಗ್ರಾಹಕರಿಗೆ ನೇರವಾಗಿ ಸೀರೆಗಳು ದೊರೆಯುತ್ತಿದೆ. ಮೈಸೂರಿನ ಮಹಿಳೆಯರು ಮೇಳಕ್ಕೆ ಆಗಮಿಸಿ ಸೀರೆಗಳನ್ನು ಕೊಂಡುಕೊಳ್ಳಿ ಎಂದರು.

ಈ ಸಿಲ್ಕ್ ಇಂಡಿಯಾ ಮೇಳವನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಈ ಮೇಳವನ್ನು ಏರ್ಪಡಿಸಲಾಗಿದೆ. ಮೈಸೂರಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಪಾದಕರನ್ನು ಪ್ರೋತ್ಸಾಹಿಸುವಂತೆ ಹಸ್ತಶಿಲ್ಪಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಟಿ.ಅಭಿನಂದ್  ಮನವಿ ಮಾಡಿದರು.

ಈ ಸಂದರ್ಭ ಉಪಮೇಯರ್ ಇಂದಿರಾ ಮಹೇಶ್,ಮಾಜಿ ಉಪಮೇಯರ್ ವನಿತಾ ಪ್ರಸನ್ನ, ಪಾಲಿಕೆಯ ಸದಸ್ಯೆ ಅಶ್ವಿನಿ ಅನಂತು, ಸಂಯೋಜಕ ಶ್ರೀಕಾಂತ್ ಮತ್ತಿತರರಿದ್ದರು.

ಭಾರತದ ಎಲ್ಲಾ ರಾಜ್ಯಗಳಿಂದ ಪರಿಶುದ್ಧ ರೇಷ್ಮೇ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ  ನಂಜರಾಜ ಬಹದ್ದೂರ್ ಛತ್ರದಲ್ಲಿ ನಿನ್ನೆಯಿಂದ 6 ದಿನಗಳ ಕಾಲ ನಡೆಯಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: