ಮೈಸೂರು

ಸುರಂಗ ಮಾರ್ಗ ಕಾಮಗಾರಿಗೆ ತೀವ್ರ ವಿರೋಧ

ಮೈಸೂರು,ಜು.12:- ನಂಜನಗೂಡಿನ ಕಪಿಲಾ ನದಿಯ ಮೆಟ್ಟಲಿನಿಂದ ದೇವಸ್ಥಾನದ‌ ಗೋಪುರದವರೆಗೆ ಮಾಡಲಾಗುತ್ತಿರುವ ಸುರಂಗ ಮಾರ್ಗ ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕಾಮಗಾರಿ ನಡೆಯುತ್ತಿದ್ದು, ದೇವಸ್ಥಾನಕ್ಕೆ ಬರುವ ಸಹಸ್ರಾರು ಭಕ್ತರಿಗೆ ಅನುಕೂಲವಾಗುವಂತೆ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಈ ರಸ್ತೆಯಲ್ಲಿ ಸಾಕಷ್ಟು ಅಪಘಾತ ಪ್ರಕರಣಗಳು ದಾಖಲಾಗಿದ್ದು, ಈ ಹಿನ್ನಲೆಯಲ್ಲಿ ಪ್ರಾಧಿಕಾರದ ವತಿಯಿಂದ ಕಾಮಗಾರಿಗೆ ಚಾಲನೆ‌ ನೀಡಲಾಗಿದೆ. 1 ಕೋಟಿ 60 ಲಕ್ಷ ರೂ.ವೆಚ್ಚದಲ್ಲಿ ಸುರಂಗ ಮಾರ್ಗ ಕಾಮಗಾರಿ ನಡೆಯುತ್ತಿದ್ದು, ಸುರಂಗ ಮಾರ್ಗ ಕಾಮಗಾರಿ ನಡೆದರೆ ಸುರಂಗ ಮಾರ್ಗಕ್ಕೆ ನೀರು ನುಗ್ಗುವ ಸಾಧ್ಯತೆಯಿದ್ದು, ಅದಕ್ಕಾಗಿ ಕಾಮಗಾರಿ ಮಾಡದಂತೆ ಕರ್ನಾಟಕ ರಕ್ಷಣಾ‌ವೇದಿಕೆ ಹೆಚ್ಚಿನ ಒತ್ತಡ ಹಾಕುತ್ತಿದೆ ಎನ್ನಲಾಗಿದೆ. ಸುರಂಗದ ಬದಲಿಗೆ ಮೇಲ್ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿದೆ. ಈಗಾಗಲೇ ಸುರಂಗ ಮಾರ್ಗ ಕಾಮಗಾರಿ ಆರಂಭವಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: