ಮೈಸೂರು

ಉಪನ್ಯಾಸಕರ ಹುದ್ದೆ ಭರ್ತಿ : ಆಕ್ಷೇಪಣೆ ಅರ್ಜಿ ಆಹ್ವಾನ         

ಮೈಸೂರು, ಜು,12 : ಮೈಸೂರು ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಮಂಜೂರಾಗಿ ಖಾಲಿ ಇರುವ ಮತ್ತು ಬಿ.ಇಎಡ್ ವ್ಯಾಸಂಗಕ್ಕೆ ಉಪನ್ಯಾಸಕರು ತೆರಳಿರುವ ಹಿನ್ನಲೆಯಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳಿಗೆ 2018-19 ನೇ ಸಾಲಿಗೆ ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರನ್ನು ನೇಮಕಕ್ಕೆ ಸಂಬಂಧಿಸಿದಂತೆ  ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ಪಟ್ಟಿಯನ್ನು  ಜುಲೈ 13 ರಂದು ಬೆಳಿಗ್ಗೆ 11 ಗಂಟೆಗೆ ಉಪನಿರ್ದೇಶಕರ ಕಚೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ, ಮೈಸೂರು ಇಲ್ಲಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು.  ಆಕ್ಷೇಪಣೆಗಳಿದ್ದಲ್ಲಿ ಜುಲೈ 13ರ ಸಂಜೆ 4 ಗಂಟೆಯೊಳಗೆ ಉಪನಿರ್ದೇಶಕರು ಪದವಿಪೂರ್ವ ಶಿಕ್ಷಣ ಇಲಾಖೆ, ಮೈಸೂರು ಇವರ ಗಮನಕ್ಕೆ  ತರಲು ಸೂಚಿಸಿದೆ.

ಖಾಲಿ ಇರುವ ಉಪನ್ಯಾಸಕ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ಕೌನ್ಸಿಲಿಂಗ್ ಮೂಲಕ ಜುಲೈ 16 ರಂದು ಆಯ್ಕೆ ಮಾಡಲಾಗುವುದು. ಕೌನ್ಸಿಲಿಂಗ್‍ಗೆ ಅರ್ಹತೆ ಹೊಂದಿರುವ ಮೆರಿಟ್ ಆಧಾರದ ಪಟ್ಟಿಯನ್ನು ಜುಲೈ14 ರಂದು ಬೆಳಿಗ್ಗೆ 11 ಗಂಟೆಗೆ ಉಪನಿರ್ದೇಶಕರ ಕಚೇರಿ, ಪದವಿಪೂರ್ವ ಶಿಕ್ಷಣ ಇಲಾಖೆ ಮೈಸೂರು ಇಲ್ಲಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುತ್ತದೆ ಎಂದು ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: