ಮನರಂಜನೆ

‘ತೂ ಸಫರ್ ಮೇರಾ’ ಹಾಡಿನಿಂದ ವೈರಲ್ ಆಗುತ್ತಿದ್ದಾರೆ ನಟಿ ಆಲಿಯಾ

ದೇಶ(ನವದೆಹಲಿ)ಜು.12:- ಬಾಲಿವುಡ್ ನಟಿ ಆಲಿಯಾ ಭಟ್ ಇತ್ತೀಚಿನ ದಿನಗಳಲ್ಲಿ ಬಹಳವೇ ಸುದ್ದಿಯಾಗುತ್ತಿದ್ದಾಳೆ.

ಆಲಿಯಾ ಭಟ್ ಮತ್ತು ನಟ ರಣಬೀರ್ ಕಪೂರ್ ಅಫೇರ್ ಕುರಿತು ಚರ್ಚೆಯಲ್ಲಿರುವಾಗಲೇ ಇವರಿಬ್ಬರೂ ತಮ್ಮ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. ಇದರ ನಂತರ ಇವರಿಬ್ಬರೂ ತಮ್ಮದೇಆದ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಇವರ ಹಳೆಯ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್  ಆಗುತ್ತಲೇ ಇರುತ್ತದೆ. ಅಭಿಮಾನಿಗಳು ಇವರಿಬ್ಬರ ಹೆಸರನ್ನು ಜೋಡಿಸಿ’ರಾಲಿಯಾ’ಎಂದು ಕರೆಯುತ್ತಿದ್ದಾರಂತೆ. ಆದರೆ ಈಗ ಆಲಿಯಾ ಭಟ್ ವಿಡಿಯೋವೊಂದು ಅಂತರ್ಜಾಲದಲ್ಲಿ ಸಾಕಷ್ಟು ವೈರಲ್ ಆಗಿದೆಯಂತೆ.

ಇದರಲ್ಲಿ ಆಲಿಯಾ ನಟ ರಣಬೀರ್ ಅಭಿನಯಿಸಿದ ಚಿತ್ರದ ಸೂಪರ್ ಹಿಟ್ ಹಾಡೊಂದನ್ನು ಹಾಡಿದ್ದಾರೆ. ಆಲಿಯಾ ಭಟ್ ಮನೀಷ್ ಪಾಲ್ ಮತ್ತು ಕರಣ್ ಜೋಹರ್ ವೇದಿಕೆಯಲ್ಲಿದ್ದು, ಹಾಡನ್ನು ಹಾಡಲು ಹೇಳಿದಾಗ ;ಯೇ ದಿನ್ ಹೇ ಮುಶ್ಕಿಲ್ ಚಿತ್ರದ  ‘‘ತೂ ಸಫರ್ ಮೇರಾ’ ಹಾಡನ್ನು ಹಾಡಿದ್ದು, ವಿಡಿಯೋ ಸಾಕಷ್ಟು ವೈರಲ್ ಆಗಿದ್ದಲ್ಲದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಘಟಾನುಘಟಿ ತಾರೆಯರೂ ಕೂಡ ತಲೆದೂಗಿದ್ದಾರಂತೆ. (ಎಸ್.ಎಚ್)

 

Leave a Reply

comments

Related Articles

error: