ಮನರಂಜನೆ

15 ವರ್ಷಗಳ ಬಳಿಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಅಕ್ಕಿನೇನಿ ನಾಗಾರ್ಜುನ

ಹೈದರಾಬಾದ್,ಜು.12-ಈಗಾಗಲೇ ಬಾಲಿವುಡ್ ನ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ನಟ ಅಕ್ಕಿನೇನಿ ನಾಗಾರ್ಜುನ ಬರೋಬ್ಬರಿ 15 ವರ್ಷಗಳ ಬಳಿಕ ಬಾಲಿವುಡ್ ನಲ್ಲಿ ಬಣ್ಣ ಹಚ್ಚಲಿದ್ದಾರೆ.

`ಬಿಗ್ ಬಿ’ ಅಮಿತಾಬ್ ಬಚ್ಚನ್, ರಣ್ಬೀರ್ ಕಪೂರ್, ಆಲಿಯಾ ಭಟ್ ಸೇರಿದಂತೆ ಅನೇಕ ದೊಡ್ಡ ತಾರೆಯರೇ ಅಭಿನಯಿಸುತ್ತಿರುವ `ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಾಗರ್ಜುನ ಅಭಿನಯಿಸಲಿದ್ದಾರೆ.

ಸೂಪರ್ ಹೀರೋ ಫ್ಯಾಂಟಸಿ ಕಥಾನಕ ಹೊಂದಿರುವ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಾಗಾರ್ಜುನ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಅಯಾನ್ ಮುಖರ್ಜಿ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಕರಣ್ ಜೋಹರ್ ಬಂಡವಾಳ ಹಾಕುತ್ತಿದ್ದಾರೆ. ಕೆಲ ವರದಿಗಳ ಪ್ರಕಾರ, ‘ಬ್ರಹ್ಮಾಸ್ತ್ರ’ ಸಿನಿಮಾ ‘ಬಾಹುಬಲಿ’ಯನ್ನೂ ಮೀರಿಸುತ್ತಂತೆ. ಸದ್ಯ ಚಿತ್ರೀಕರಣ ಹಂತದಲ್ಲಿ ಇರುವ ‘ಬ್ರಹ್ಮಾಸ್ತ್ರ’ ಚಿತ್ರದ ಸೆಟ್ ಗೆ ಇಂದು ನಾಗಾರ್ಜುನ ಎಂಟ್ರಿಕೊಟ್ಟಿದ್ದಾರೆ.

ಅಕ್ಕಿನೇನಿ ನಾಗಾರ್ಜನ ಬಾಲಿವುಡ್ ನಲ್ಲಿ ‘ಖುದ್ ಗವಾ’, ‘ಕ್ರಿಮಿನಲ್’, ‘ಮಿ.ಬೇಚಾರಾ’, ‘ಎಲ್.ಓ.ಸಿ ಕಾರ್ಗಿಲ್’  ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ‘ಎಲ್.ಓ.ಸಿ ಕಾರ್ಗಿಲ್’ ಬಳಿಕ ಟಾಲಿವುಡ್ ನಲ್ಲಿಯೇ ಸೆಟಲ್ ಆದರು. ಈಗ ಮತ್ತೆ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. (ಎಂ.ಎನ್)

Leave a Reply

comments

Related Articles

error: