ಮೈಸೂರು

ಜು.20 : ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ : ಪ್ರಶಸ್ತಿ ಪ್ರದಾನ

ಮೈಸೂರು,ಜು.13:- ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ವಿವಿಧ ವಿಭಾಗಗಳಲ್ಲಿ ವಾರ್ಷಿಕ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದ್ದು, ಈ ಸಾಲಿನ ಪತ್ರಿಕಾ ದಿನಾಚರಣೆ ವೇಳೆ ವಿವಿಧ ಪ್ರಶಸ್ತಿಗಳಿಗೆ ಆರು ಮಂದಿ ಪತ್ರಕರ್ತರು ಹಾಗೂ ಪತ್ರಿಕಾ ಛಾಯಾಗ್ರಾಹಕರನ್ನು ಆಯ್ಕೆ ಮಾಡಿದೆ.

ವರ್ಷದ ವರದಿಗಾರ ಪ್ರಶಸ್ತಿಗೆ ಹರೀಶ್ ತಲಕಾಡು, ವರದಿಗಾರ, ವಿಜಯಕರ್ನಾಟಕ ದಿನಪತ್ರಿಕೆ, ವರ್ಷದ ಛಾಯಾಗ್ರಾಹಕ  ಉದಯಶಂಕರ್, ಛಾಯಾಗ್ರಾಹಕ, ದಿ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್ ದಿನಪತ್ರಿಕೆ, ಜೀವಮಾನ ಸಾಧನೆ ರಾಜಕುಮಾರ್ ಭಾವಸಾರ್, ಹಿರಿಯ ವರದಿಗಾರ, ಮೈಸೂರು ಮಿತ್ರ ದಿನಪತ್ರಿಕೆ, ವರ್ಷದ ಉಪಸಂಪಾದಕ ದೊಡ್ಡನಹುಂಡಿ ರಾಜಣ್ಣ, ಉಪಸಂಪಾದಕ, ವಿಜಯವಾಣಿ ದಿನಪತ್ರಿಕೆ, ವರ್ಷದ ಗ್ರಾಮಾಂತರ ಪತ್ರಕರ್ತ ಹನಗೋಡು ನಟರಾಜ್, ವರದಿಗಾರ, ವಿಜಯಕರ್ನಾಟಕ ದಿನಪತ್ರಿಕೆ, ಹುಣಸೂರು ವರ್ಷದ ಗ್ರಾಮಾಂತರ ಛಾಯಾಗ್ರಾಹಕ ಕನ್ನಡ ಪ್ರಮೋದ್, ಹೆಗ್ಗಡದೇವನಕೋಟೆ ಇವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗೆ ಭಾಜನರಾದ ಎಲ್ಲರಿಗೂ ಜು.20ರ ಶುಕ್ರವಾರ ಬೆಳಗ್ಗೆ 10.30ಕ್ಕೆ ನಗರದ ಅಗ್ರಹಾರದಲ್ಲಿರುವ ರಾಜೇಂದ್ರ ಕಲಾಮಂದಿರದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್ ಬಾಬು ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: