ಕರ್ನಾಟಕಪ್ರಮುಖ ಸುದ್ದಿ

ಶಿಥಿಲ ವ್ಯವಸ್ಥೆಯಲ್ಲಿರುವ ಶಾಲಾ ಕೊಠಡಿಗಳ ದುರಸ್ತಿಗೆ ಕ್ರಮ: ಸಚಿವ ಎನ್. ಮಹೇಶ್

ಬೆಂಗಳೂರು (ಜುಲೈ 13): ರಾಜ್ಯದ 5588 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 10258 ಕೊಠಡಿಗಳು ಹಾಗೂ 264 ಸರ್ಕಾರಿ ಪ್ರೌಢ ಶಾಲೆಗಳಲ್ಲಿ 949 ಕೊಠಡಿಗಳು ಶಿಥಿಲಗೊಂಡಿರುತ್ತವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಅವರು ತಿಳಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಗುರುವಾರ ಸದಸ್ಯ ಆರ್. ಧರ್ಮಸೇನ್ ಅವರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಸಚಿವರು ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ದುರಸ್ಥಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, 2017-18 ನೇ ಸಾಲಿನಲ್ಲಿ 672 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಥಿಲಗೊಂಡ 760 ಕೊಠಡಿಗಳ ಮರು ನಿರ್ಮಾಣಕ್ಕಾಗಿ ರೂ 6604.95 ಲಕ್ಷ ಹಾಗೂ 238 ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಶಿಥಿಲಗೊಂಡ 312 ಕೊಠಡಿಗಳ ಮರು ನಿರ್ಮಾಣಕ್ಕಾಗಿ ರೂ 4132/- ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

2017-18 ನೇ ಸಾಲಿನಲ್ಲಿ 1338 ಸರ್ಕಾರಿ ಪ್ರಾಥಮಿ ಶಾಲೆಗಳಲ್ಲಿ 1338 ಕೊಠಡಿಗಳ ದುರಸ್ಥಿಗಾಗಿ ರೂ. 2866.00 ಲಕ್ಷ ಹಾಗೂ 777 ಸರ್ಕಾರಿ ಪ್ರೌಢ ಶಾಲೆಗಳಲ್ಲಿ 777 ಕೊಠಡಿಗಳ ದುರಸ್ಥಿಗಾಗಿ ರೂ. 3500 ಲಕ್ಷಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

2018-19 ನೇ ಸಾಲಿನ ಆಯವ್ಯಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಹಂಚಿಕೆಯಾದ ಅನುದಾನದ ಲಭ್ಯತೆ ಆಧರಿಸಿ, ಸರ್ಕಾರಿ ಶಾಲೆಗಳ ಕೊಠಡಿ ದುರಸ್ಥಿ, ಶಿಥಿಲಗೊಂಡ ಕೊಠಡಿ/ಕಟ್ಟಡಗಳ ಮರು ನಿರ್ಮಾಣಕ್ಕಾಗಿ ಆದ್ಯತೆ ಮೇರೆಗೆ ಹಂತ-ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು. (ಎನ್.ಬಿ)

Leave a Reply

comments

Related Articles

error: