ಮನರಂಜನೆ

ವೆಬ್ ಸಿರೀಸ್ ನಿರ್ಮಾಣ ಮಾಡುತ್ತಿದ್ದಾರೆ ಶಿವರಾಜ್ ಕುಮಾರ್

ಬೆಂಗಳೂರು,ಜು.13-ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿದ್ದಾರೆ. ಧಾರಾವಾಹಿಯನ್ನು ನಿರ್ಮಾಣ ಮಾಡಿದ್ದ ಶಿವಣ್ಣ ಈಗ ವೆಬ್ ಸಿರೀಸ್ ನಿರ್ಮಾಣ ಮಾಡುತ್ತಿದ್ದಾರೆ.

ಶ್ರೀ ಮುತ್ತು ಸಿನಿ ಸರ್ವಿಸ್ ಬ್ಯಾನರ್ ನಲ್ಲಿ ವೆಬ್ ಸಿರೀಸ್ ನಿರ್ಮಾಣವಾಗುತ್ತಿದ್ದು, ನಿನ್ನೆ ಶಿವಣ್ಣ ಹುಟ್ಟುಹಬ್ಬದ ಪ್ರಯುಕ್ತ ವೆಬ್ ಸಿರೀಸ್ ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್ ಆಕರ್ಷಕವಾಗಿದ್ದು, ‘ಹೇಟ್ ಯೂ ರೋಮಿಯೊ’ ಎಂಬ ಟೈಟಲ್ ಇದಕ್ಕೆ ಇಡಲಾಗಿದೆ.

ಆರ್.ಜೆ.ಪ್ರದೀಪ್ ಅವರ ಸಖತ್ ಸ್ಟೂಡಿಯೋ ಹಾಗೂ ಶಿವಣ್ಣ ಅವರ ಶ್ರೀಮುತ್ತು ಸಿನಿ ಸರ್ವಿಸ್ ಸಹಭಾಗಿತ್ವದಲ್ಲಿ ಈ ವೆಬ್ ಸಿರೀಸ್ ಬರಲಿದೆ. ವಿಶೇಷ ಅಂದರೆ ಈ ಹಿಂದೆ ಲೂಸ್ ಕನೆಕ್ಷನ್ ಎಂಬ ವೆಬ್ ಸಿರೀಸ್ ಮೂಲಕ ದೊಡ್ಡ ಹೆಸರು ಮಾಡಿದ್ದ ತಂಡವೇ ಈಗ ಮತ್ತೊಂದು ಹೊಸ ವೆಬ್ ಸಿರೀಸ್ ಮಾಡುತ್ತಿದೆ. ಇಶಾಮ್ ಖಾನ್ ಹಾಗೂ ಹಸೀನ್ ಖಾನ್ ಈ ವೆಬ್ ಸಿರೀಸ್ ಅನ್ನು ನಿರ್ದೇಶನ ಮಾಡುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: