ಮೈಸೂರು

ರೈತರ ಬೆಳೆಸಾಲವನ್ನು ಸಂಪೂರ್ಣ ಮನ್ನಾ ಮಾಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿರವರು ಆದೇಶ ಹೊರಡಿಸುವಂತೆ ಒತ್ತಾಯ

ಮೈಸೂರು,ಜು.13:- ರೈತರ ಬೆಳೆಸಾಲವನ್ನು ಚಾಲ್ತಿಯಲ್ಲಿರುವ ಸಾಲಕ್ಕೂ ಅನ್ವಯವಾಗುವಂತೆ ಸಂಪೂರ್ಣ ಮನ್ನಾ ಮಾಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿರವರು ಆದೇಶ ಹೊರಡಿಸಬೇಕೆಂದು ರಾಜ್ಯ ರೈತ ಸಂಘದ ಸದಸ್ಯರು ಒತ್ತಾಯಿಸಿದರು.

ತೀ.ನರಸೀಪುರ ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ನಿನ್ನೆ  ನಡೆದ ರೈತರ ಸಭೆಯಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ. ಜಿ.ಶಿವಪ್ರಸಾದ್, ಮಾತನಾಡಿ, ಕುಮಾರಸ್ವಾಮಿರವರು ಸಿಎಂ ಆಗಿ ಅಧಿಕಾರಿ ಸ್ವೀಕರಿಸುವ ವೇಳೆ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಹೇಳಿದ್ದಾರೆ.ಆದರೆ ಅಧಿಕಾರಿ ಸ್ವೀಕರಿಸಿದ ಮೇಲೆ ಕೆಲವು ನಿಯಮಗಳನ್ನು ಅಳವಡಿಸಿಕೊಂಡು ಸಾಲಮನ್ನಾ ಘೋಷಣೆ ಮಾಡಿರುವ ಪರಿಣಾಮ ರಾಜ್ಯದ ಬಹುತೇಕ ಅರ್ಹ ಫಲಾನುಭವಿಗಳಿಗೆ ಸಾಲಮನ್ನಾ ಪ್ರಯೋಜನ ಸಿಗದಂತಾಗಿದೆ. ಮುಖ್ಯಮಂತ್ರಿಗಳು ಎಲ್ಲಾ ರೀತಿಯ ಷರತ್ತುಗಳನ್ನು ತೆಗೆದು 2 ಲಕ್ಷರೂ.ವರೆಗಿನ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ ರೈತರ ಹಿತ ಕಾಯುವಂತೆ ಮನವಿ ಮಾಡಿದರು.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ನಾಲೆಗಳಲ್ಲಿ ನೀರು ಹರಿಯದ ಕಾವೇರಿ, ಕಬಿನಿ ನಾಲಾ ವ್ಯಾಪ್ತಿಯಲ್ಲಿ ಜಮೀನುಗಳು ಸಂಪೂರ್ಣ ಒಣಗಿ ಜೊಂಡುಗಟ್ಟಿದ್ದು, ಅರೆ ನೀರಾವರಿಗೆ ಜಮೀನು ಸಿದ್ದಪಡಿಸಬೇಕಾದಲ್ಲಿ 1 ಎಕರೆಗೆ 20 ಸಾವಿರೂ ಖರ್ಚುಮಾಡಬೇಕಾಗುತ್ತದೆ.

ಹಾಗಾಗಿ ರೈತರ ಬೆಳೆಗಳಿಗೆ ಸಂಪೂರ್ಣ ನೀರು ಒದಗಿಸುವುದಾದರೇ ನೀರುಹರಿಸಿ ಇಲ್ಲವೇ ನಮ್ಮ ನೀರನ್ನು ತಮಿಳುನಾಡಿಗೆ ಹರಿಸಿ ರೈತರಿಗೆ 1 ಎಕರೆಗೆ 50 ಸಾವಿರರೂ. ಪರಿಹಾರ ನೀಡಬೇಕು ತಪ್ಪಿದಲ್ಲಿ ಸಂಬಂಧಪಟ್ಟ ಇಲಾಖೆ ಎದುರು ನಿರಂತರ ಪ್ರತಿಭಟನೆ ನಡೆಸುವುದಾಗಿ ಹೇಳಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಅತ್ತಹಳ್ಳಿ ಶಿವನಂಜು, ಆಲಗೂಡು ಮಹದೇವು, ಟೌನ್ ಅಧ್ಯಕ್ಷ ಕೊತ್ತೇಗಾಲ ಶಾಂತರಾಜು, ಉಪಾಧ್ಯಕ್ಷ ಟಿ.ಎಂ.ದಿನೇಶ್, ಖಜಾಂಚಿ ಎಂ.ಮಹೇಶ್ ಇತರರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: