
ದೇಶಪ್ರಮುಖ ಸುದ್ದಿ
ಆನ್ಲೈನ್ ವ್ಯವಹಾರ ಹೆಚ್ಚಿಸಲು ಕೇಂದ್ರ ಸರ್ಕಾರದಿಂದ ಲಕ್ಕಿ ಡ್ರಾ ಯೋಜನೆ
ನವದೆಹಲಿ: ಕೇಂದ್ರ ಸರ್ಕಾರ ನೋಟು ನಿಷೇಧದ ನಂತರ ಡಿಜಿಟಲ್ ವ್ಯವಹಾರ ಹೆಚ್ಚಿಸಲು ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಈ ಸರದಿಗೆ ಇದೀಗ “ಲಕ್ಕಿ ಗ್ರಾಹಕ” ಯೋಜನೆ ಸೇರಿಕೊಂಡಿದೆ.
ನವದೆಹಲಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ನೀತಿ ಆಯೋಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಮಿತಾಭ್ ಕಾಂತ್ ಅವರು ಕೇಂದ್ರ ಸರ್ಕಾರದ ಈ ಹೊಸ ಯೋಜನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಆನ್ಲೈನ್ ವ್ಯವಹಾರ ಮಾಡುವ ಗ್ರಾಹಕರಿಗೆ ಹಲವು ಹಂತದ ಬಹುಮಾನಗಳನ್ನು ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ಲಕ್ಕಿ ಡಿಪ್ನಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗುವುದು. ಪ್ರತಿದಿನ 15 ಜನ ವಿಜೇತರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ ತಲಾ 1 ಸಾವಿರ ರೂ.ಗಳ ಬಹುಮಾನ ವಿತರಿಸಲಾಗುವುದು.
ಆನ್`ಲೈನ್`ನಲ್ಲಿ ಅತ್ಯಧಿಕ ವ್ಯವಹಾರ ಮಾಡಿದ ಗ್ರಾಹಕರಿಗೆ 1 ಲಕ್ಷ ರೂ. ಮತ್ತು ವ್ಯಾಪಾರಿಗಳಿಗೆ 50 ಸಾವಿರ ರೂ.ಗಳ ಬಹುಮಾನ ನೀಡುವ ಅಂಶವೂ ಈ ಯೋಜನೆಯಲ್ಲಿ ಸೇರಿದೆ. ಬರುವ ಕ್ರಿಸ್ಮಸ್ ನಿಂದ ಈ ಯೋಜನೆ ಜಾರಿಗೆ ಬರಲಿದೆ.