ಕರ್ನಾಟಕಪ್ರಮುಖ ಸುದ್ದಿ

ತಾಂತ್ರಿಕ, ತಾಂತ್ರಿಕೇತರ ಹುದ್ದೆಗಳ ನೇಮಕಾತಿಗಾಗಿ ಸಂದರ್ಶನ

ಬೆಂಗಳೂರು (ಜುಲೈ 14): ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಇಲಾಖೆಯಲ್ಲಿನ ಗ್ರೂಪ್-ಎ ಮತ್ತು ಬಿ ತಾಂತ್ರಿಕ/ತಾಂತ್ರಿಕೇತರ ಹುದ್ದೆಗಳ ನೇಮಕಾತಿಗಾಗಿ ಆಯೋಗದ ಕೇಂದ್ರ ಕಚೇರಿ, ಬೆಂಗಳೂರು ಇಲ್ಲಿ ಆಯಾ ಹುದ್ದೆಗಳ ಸಂದರ್ಶನವನ್ನು ನಡೆಸಲಿದೆ.
ಜುಲೈ 16 ರಿಂದ 18 ರವರೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿನ ಭೂವಿಜ್ಞಾನಿ – 97 +40 (ಹೈ.ಕ) ಹುದ್ದೆಗಳು, ಜುಲೈ 19 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು 52 ಹುದ್ದೆಗಳು ಮತ್ತು ಅಧೀಕ್ಷಕರು ದರ್ಜೆ -1 ರ ಹುದ್ದೆಗಳು ಹಾಗೂ ಜುಲೈ 20 ರಂದು ಔಷಧ ನಿಯಂತ್ರಣ ಇಲಾಖೆಯಲ್ಲಿನ ಜೂನಿಯರ್ ಸೈಂಟಿಫಿಕ್ ಆಫೀಸರ್ 33 (07+01 ಬ್ಯಾಲಾ+25) ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ.
ಅಭ್ಯರ್ಥಿಗಳಿಗೆ ಸಂದರ್ಶನ ಸೂಚನಾ ಪತ್ರಗಳನ್ನು ಈಗಾಗಲೇ ಕಳುಹಿಸಲಾಗಿದ್ದು, ಸಂದರ್ಶನದ ಅಭ್ಯರ್ಥಿಗಳ ಪಟ್ಟಿಗಳನ್ನು ಮಾಹಿತಿಗಾಗಿ ಆಯೋಗದ ವೆಬ್‍ಸೈಟ್ “http://kpsc.kar.nic.in/Eligibility List” ನಲ್ಲಿ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ತಿಳಿಸಿದೆ. (ಎನ್.ಬಿ)

Leave a Reply

comments

Related Articles

error: