ಮೈಸೂರು

ಪ್ರಯಾಣಿಕರಿಗಾಗಿ ಕಾದು ನಿಂತಿದ್ದ ಕಾರು ಚಾಲಕನ ಮೇಲೆ ಹಲ್ಲೆ : ಕಂಠಪೂರ್ತಿ ಕುಡಿದು ರಿವಾಲ್ವರ್ ನಿಂದ ಯದ್ವಾತದ್ವಾ ಗುಂಡು ಹಾರಿಸಿದ

ಮೈಸೂರು,ಜು.14:- ಟ್ರಾವೆಲ್ ಏಜೆನ್ಸಿಯೊಂದರ ಚಾಲಕ ತನ್ನ ಪ್ರಯಾಣಿಕರಿಗಾಗಿ ಕಾಯುತ್ತ ಕಾರು ನಿಲ್ಲಿಸಿಕೊಂಡಿದ್ದ ವೇಳೆ, ಪಾನಮತ್ತನಾಗಿ ನಶೆಯಲ್ಲಿದ್ದ ವ್ಯಕ್ತಿಯೋರ್ವ ಬಂದು ಚಾಲಕನನ್ನು ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೇ, ಹಲ್ಲೆ ನಡೆಸಿ ರಿವಾಲ್ವರ್ ನಿಂದ ಯದ್ವಾ ತದ್ವಾ ಗುಂಡು ಹಾರಿಸಿದ ಘಟನೆ ವಿಜಯನಗರ ನಾಲ್ಕನೇ ಹಂತದಲ್ಲಿ ನಡೆದಿದೆ.

ಕಂಠಪೂರ್ತಿ ಕುಡಿದು ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಜೈ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸತೀಶ್ ಗೌಡ ಎಂದು ಹೇಳಲಾಗಿದ್ದು, ಈತ ಬಿಐಟಿ ಟ್ರಾವೆಲ್ ಏಜೆನ್ಸಿಯ ಕಾರಿನ ಚಾಲಕ ರಘು ಎಂಬವರು ವಿಜಯನಗರದ ನಾಲ್ಕನೇ ಹಂತದಲ್ಲಿ ಪ್ರಯಾಣಿಕರಿಗಾಗಿ ಕಾದು ನಿಂತಿದ್ದ ವೇಳೆ ಅವರ ಬಳಿ ಬಂದು ಏನಕ್ಕೆ ಇಲ್ಲಿ ನಿಂತಿದ್ದೀಯಾ ಎಂದು ಪ್ರಶ್ನಿಸಿ, ಅವಾಚ್ಯ ಶಬ್ದಗಳಿಂದ ಬೈದು ಅವರ ಮೇಲೆ ಹಲ್ಲೆ ನಡೆಸಿ, ತನ್ನ ಕಿಸೆಯಲ್ಲಿದ್ದ ರಿವಾಲ್ವರ್ ಹೊರ ತೆಗೆದು ಯದ್ವಾತದ್ವಾ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ತಕ್ಷಣವೇ ರಘು ವಿಜಯನಗರ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಹೋಗಿ ನೋಡಲಾಗಿ ಇನ್ನೋವಾ ಕಾರಿನಲ್ಲಿ ತೆರಳಿ ಸ್ವಲ್ಪ ದೂರದಲ್ಲೇ ಬಿದ್ದು ಕೊಂಡಿದ್ದ. ಪೊಲೀಸರು ಆತನನ್ನು ಜೈಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ  ಸತೀಶ್ ಗೌಡ ಎಂದು ಹೇಳಿದ್ದು, ಠಾಣೆಯಲ್ಲಿ ಕೂರಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: