ಮೈಸೂರು

ಆಲನಹಳ್ಳಿಯಲ್ಲಿ ನೂತನ ಪೊಲೀಸ್ ಠಾಣೆ ಉದ್ಘಾಟನೆ

ಮೈಸೂರಿಗೆ ಎರಡು ಹೊಸ ಪೊಲೀಸ್ ಠಾಣೆಗಳನ್ನು ನೀಡಲಾಗಿದ್ದು, ಮೈಸೂರು –ಬನ್ನೂರು ರಸ್ತೆಯ ದೇವೇಗೌಡ ವೃತ್ತದ ಬಳಿ ಖಾಸಗಿ ಕಟ್ಟಡವೊಂದರಲ್ಲಿ ನೂತನವಾಗಿ ಆರಂಭಿಸಲಾದ  ಆಲನಹಳ್ಳಿ ಪೊಲೀಸ್ ಠಾಣೆಯನ್ನು ಶುಕ್ರವಾರ ಉದ್ಘಾಟಿಸಲಾಯಿತು.

ನೂತನವಾಗಿ ಆರಂಭಿಸಲಾದ ಪೊಲೀಸ್ ಠಾಣೆಯನ್ನು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸರ್ಕಾರ ಮೈಸೂರು ವ್ಯಾಪ್ತಿಗೆ ಎರಡು ಪೊಲೀಸ್ ಠಾಣೆಯನ್ನು ತೆರೆಯಲು ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಆಲನಹಳ್ಳಿ ಮತ್ತು ಹೆಬ್ಬಾಳದಲ್ಲಿ ಎರಡು ನೂತನ ಪೊಲೀಸ್ ಠಾಣೆಗಳನ್ನು ತೆರೆಯಲಾಗುತ್ತಿದೆ. ನಜರಾಬಾದ್ ಠಾಣಾ ವ್ಯಾಪ್ತಿ ತುಂಬಾ ದೊಡ್ಡದಿದೆ. ಅಲ್ಲಿನ ಸಿಬ್ಬಂದಿಗಳಿಗೆ ನಿಭಾಯಿಸೋದು ಕಷ್ಟವಾಗುತ್ತಿತ್ತು. ಅದಕ್ಕೆ ಇನ್ನೊಂದು ಠಾಣೆ ಬೇಕು ಎನ್ನುವ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗೃಹ ಇಲಾಖೆ ಅನುಮತಿ ನೀಡಿದ್ದರಿಂದ ನೂತನವಾಗಿ ಠಾಣೆಯನ್ನು ಆರಂಭಿಸಲಾಗಿದೆ. ಈ ಠಾಣೆಗೆ 4ರಿಂದ 5ಕಿಲೋಮೀಟರ್ ಹೆಚ್ಚುವರಿ ಕಾರ್ಯ ಬೀಳಲಿದೆ. ಠಾಣೆಗೆ ಇನ್ಸಪೆಕ್ಟರ್ ಶೇಖರ್ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಡಿಸಿಪಿ ಶೇಖರ್, ಡಿಸಿಪಿ ರುದ್ರಮನಿ ಮತ್ತಿತರ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

comments

Related Articles

error: