ಮೈಸೂರು

ಅದಾಲತ್ ನಲ್ಲಿ ಅಹವಾಲು ಸಲ್ಲಿಕೆ

ಮೈಸೂರಿನ ರೈಲ್ವೆ ಕಚೇರಿಯ ಸಭಾಂಗಣದಲ್ಲಿ ನಡೆದ ಪಿಂಚಣಿ ಅದಾಲತ್ ನಲ್ಲಿ ಬೋನಸ್ ಬಾಕಿ, ನಿವೃತ್ತಿ ವೇತನ ನಿಗದಿಯಲ್ಲಿ ವ್ಯತ್ಯಯ ಕುರಿತಂತೆ ಪಿಂಚಣಿದಾರರು ಅಹವಾಲು ಸಲ್ಲಿಸಿದರು.

ನೈರುತ್ಯ ರೈಲ್ವೆ ವಿಭಾಗದ ಕಚೇರಿಯಲ್ಲಿ ವಿಭಾಗೀಯ ವ್ಯವಸ್ಥಾಪಕ ಅತುಲ್ ಗುಪ್ತ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 15ಕ್ಕೂ ಅಧಿಕ ನಿವೃತ್ತ ನೌಕರರು ಮನವಿಗಳನ್ನು ಸಲ್ಲಿಸಿದರು.

ಕೆಲವರು ನಮಗೆ ಬೋನಸ್ ಪಾವತಿಯಾಗಿಲ್ಲ ಎಂದು ಹೇಳಿದರೆ ಇನ್ಕೆಲವರು ಹಿಂಬಾಕಿ ಭತ್ಯೆಯಲ್ಲಿ ವ್ಯತ್ಯಯವಾಗಿದೆ ಎಂದು ತಿಳಿಸಿದರು. 7ನೇ ವೇತನ ಆಯೋಗದ ಅನ್ವಯ ನಿವೃತ್ತಿ ವೇತನ ನಿಗದಿಪಡಿಸಲಾಗಿದೆ. ಹಿಂಬಾಕಿ ಇನ್ನೂ ಕೊಟ್ಟಿಲ್ಲ ಎಂದು ಮನವಿ ಸಲ್ಲಿಸಿದರು.

ಹೊಳೆನರಸೀಪುರ, ಮೈಸೂರು, ಹಾಸನ ಸೇರಿದಂತೆ ವಿವಿಧೆಡೆಗಳಿಂದ ನಿವೃತ್ತ ನೌಕರರು ಅದಾಲತ್ ನಲ್ಲಿ ಪಾಲ್ಗೊಂಡಿದ್ದರು.

ವಿಭಾಗೀಯ ಹಿರಿಯ ವ್ಯವಸ್ಥಾಪಕ ಶಿವಶಂಕರ್, ಹಿರಿಯ ಸಿಬ್ಬಂದಿ ಅಧಿಕಾರಿ ಪ್ರಶಾಂತ್ ಮಸ್ತಿಹೊಳಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: