ಪ್ರಮುಖ ಸುದ್ದಿಮೈಸೂರು

ಅಪರಾಧ ನಿಯಂತ್ರಣಕ್ಕೆ ಮೈಸೂರಿನಲ್ಲಿ ರೂಪುಗೊಂಡ ಮತ್ತೆರಡು ಠಾಣೆಗಳು

ಮೈಸೂರಿನ ಹೆಬ್ಬಾಳು ಮೂರನೇ ಹಂತದಲ್ಲಿ ನೂತನ ಹೆಬ್ಬಾಳು ಪೊಲೀಸ್ ಠಾಣೆಯನ್ನು ಆರಂಭಿಸಲಾಗಿದ್ದು ಶುಕ್ರವಾರ ಉದ್ಘಾಟನೆಯನ್ನು ನೆರವೇರಿಸಲಾಯಿತು.

ಶುಭೋಧಿನಿ ಛತ್ರದ ಬಳಿಯ ಖಾಸಗಿ ಕಟ್ಟಡವೊಂದರಲ್ಲಿ ಆರಂಭಿಸಲಾದ ನೂತನ ಠಾಣೆಯನ್ನು ಮೈಸೂರು ನಗರ ಪೊಲೀಸ್ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿಜಯನಗರ ಠಾಣಾ ವ್ಯಾಪ್ತಿ ತುಂಬಾ ದೊಡ್ಡದಿದೆ. ಇಲ್ಲಿ ಕೈಗಾರಿಕಾ ವಲಯವೂ ಬರುವುದರಿಂದ ಸಿಬ್ಬಂದಿಗಳಿಗೆ ಎಲ್ಲ ಕಡೆಯೂ ಗಮನ ನೀಡುವುದು ಕಷ್ಟವಾಗುತ್ತಿದೆ. ಇದೀಗ ಇಲ್ಲಿ ರಿಂಗ್ ರಸ್ತೆಯು ಆರಂಭವಾಗಿರುವುದರಿಂದ ಸುಲಭವಾಗಿ ಅಪರಾಧಿಗಳನ್ನು ಹಿಡಿಯಲು ನೂತನವಾಗಿ  ಈ ಠಾಣೆಯನ್ನು ಆರಂಭಿಸಲಾಗಿದೆ ಎಂದರು. ಹೆಬ್ಬಾಳು ಪೊಲೀಸ್ ಠಾಣಾ ವ್ಯಾಪ್ತಿಗೆ ನಾಲ್ಕು ಕಿಲೋಮೀಟರ್ ವಿಸ್ತರಣೆ ಹೆಚ್ಚುವರಿಯಾಗಿ ಸಿಗಲಿದೆ ಎಂದರು.

ಹೆಬ್ಬಾಳು ಠಾಣೆಯ ಎಸ್ಸೈ ಆಗಿ ತಿಮ್ಮೇಗೌಡರು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭ ಡಿಸಿಪಿಗಳಾದ ಶೇಖರ್, ರುದ್ರಮುನಿ ಮತ್ತು ಎಲ್ಲಾ ಠಾಣೆಯ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಾಂಸ್ಕೃತಿಕ ನಗರಿ ಮೈಸೂರು ವೇಗವಾಗಿ ಬೆಳೆಯುತ್ತಿದ್ದು ಜನಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಇದಕ್ಕೆ ತಕ್ಕಂತೆ ಇಲ್ಲಿ ಮನೆಗಳವು, ಕೊಲೆ, ಸರಗಳ್ಳತನಗಳಂತಹ ಅಪರಾಧಗಳು ಹೆಚ್ಚುತ್ತಿವೆ. ಇದುವರೆಗೆ ಮೈಸೂರಿನಲ್ಲಿ ಹದಿನೇಳು ಪೊಲೀಸ್ ಠಾಣೆಗಳಿತ್ತು ಮತ್ತು ಮಹಿಳಾ ಠಾಣೆಯಿತ್ತು. ಇದೀಗ ಒಟ್ಟು 20 ಠಾಣೆಗಳಾಗಿವೆ. ಹೆಚ್ಚುತ್ತಿರುವ ಅಪರಾಧಗಳನ್ನು ತಪ್ಪಿಸುವ ಉದ್ದೇಶದಿಂದ ಇನ್ನೆರಡು ನೂತನ ಠಾಣೆಗಳು ಕಾರ್ಯಾಚರಿಸಲಿವೆ.

Leave a Reply

comments

Related Articles

error: