ಮೈಸೂರು

ಚಿತ್ರನಟ ಯಶ್ ಕೊಲೆ ಸಂಚು : ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿ ಪ್ರತಿಭಟನೆ .16.

ಮೈಸೂರು,ಜು.14 : ಚಿತ್ರನಟ ಯಶ್ ಕೊಲೆ ಸಂಚಿನ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ಜು.16ರಂದು ಪ್ರತಿಭಟನೆ ನಡೆಸಲಾಗುವುದು ಎಂದು  ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಬಳಗವು ತಿಳಿಸಿತು.

ಅಭಿಮಾನಿ ಬಳಗದ ಬಿ.ಎಂ.ರಘು ಅವರು ಮಾತನಾಡಿ, ಸರಳ ಸ್ನೇಹಿ ಜೀವಿ, ಮಾನವೀಯ ಮೌಲ್ಯಗಳಿಗೆ ಒತ್ತು ನೀಡುವ ನಟ ಯಶ್ ಅವರ ಕೊಲೆಗೆ ಸಂಚು ನಡೆಸಿರುವುದು ನಿಜಕ್ಕೂ ಆತಂಕ ಮೂಡಿಸಿದೆ, ಹಾಲಿವುಡ್ ನಲ್ಲಿ ನಡೆಯುತ್ತಿದ್ದಂತಹ ಕೃತ್ಯಗಳು ಚಂದನವನಕ್ಕೂ ಕಾಲಿಸಿದು ಅತ್ಯಂತ ಹೇಯ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಬೇಕು. ಈ ಬಗ್ಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಗೃಹ ಸಚಿವರು ಪ್ರತಿಕ್ರಿಯಿಸಬೇಕೆಂದು ಒತ್ತಾಯಿಸಿದ ಅವರು,  ಯಶ್ ಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಪೊಲೀಸ್ ಮಹಾನಿರ್ದೇಶಕರಲ್ಲಿ ಮನವಿ ಮಾಡಿದರು.

ನಮ್ಮ ಸಾಂಕೇತಿಕ ಪ್ರತಿಭಟನೆಗೆ ನಗರದ ಹಲವಾರು ಸಂಘ ಸಂಸ್ಥೆಗಳು ಭಾಗಿಯಾಗಲಿದ್ದು, ಸೂಕ್ತ ತನಿಖೆಯಿಂದ ಅರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.

ಅಭಿಮಾನಿ ಬಳಗದ ಅಧ್ಯಕ್ಷ ಮನು ಯಶ್, ಸಂತೋಷ್, ಹೇಮಣ್ಣ, ಸುರೇಶ್ ಬಾಬು ಗೋಷ್ಠಿಯಲ್ಲಿ ಇದ್ದರು. (ಕೆ.ಎಂ.ಆರ್)

Leave a Reply

comments

Related Articles

error: