ಮೈಸೂರು

“ನಗರ ಲಸಿಕಾ ಅಭಿಯಾನ” ಕಾರ್ಯಕ್ರಮ

ಮೈಸೂರು, ಜು.14:-  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಿಷನ್ ಇಂದ್ರಧನುಷ್ ಅಭಿಯಾನ ಕಾರ್ಯಕ್ರಮದಡಿ ರಕ್ಷಣಾ ಚುಚ್ಚುಮದ್ದುನಿಂದ ಭಾಗಶಃ ಅಥವಾ ಪೂರ್ಣ ಪ್ರಮಾಣದಲ್ಲಿ ವಂಚಿತರಾದ ಗರ್ಭಿಣಿಯರು, 0-2 ವರ್ಷದ ಮಕ್ಕಳು ಹಾಗೂ 5-6 ವರ್ಷದ ಮಕ್ಕಳನ್ನು ಗುರುತಿಸಿ ಸಂಪೂರ್ಣ ರಕ್ಷಣ ಲಸಿಕೆ ನೀಡಲಾಗುವುದು.
2018-19ನೇ ಸಾಲಿನಲ್ಲಿ ಮಿಷನ್ ಇಂದ್ರಧನುಷ್ ‘ನಗರ ಲಸಿಕಾ ಅಭಿಯಾನ’ ಕಾರ್ಯಕ್ರಮವನ್ನು ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂರು ಸುತ್ತಿನಲ್ಲಿ ಅನುಷ್ಠಾನಗೊಳಿಸುತ್ತಿದ್ದು, ಈ ಸದರಿ ಕಾರ್ಯಕ್ರಮದಲ್ಲಿ ವಿಶೇಷ ಶಿಬಿರಗಳ ಮೂಲಕ ಪೂರ್ಣ  ಮತ್ತು ಸಂಪೂರ್ಣ ರಕ್ಷಣಾ ಲಸಿಕೆಯನ್ನು ನೀಡುವ ಭಾರತ ಸರ್ಕಾರದ ಮಹತ್ತರ ಯೋಜನೆ ಇದಾಗಿರುತ್ತದೆ. ಈ ಯೋಜನೆಯು ಜುಲೈ-2018 ರಿಂದ ಸಪ್ಟೆಂಬರ್-2018 ರ ವರೆವಿಗೆ 3 ತಿಂಗಳ ಕಾಲಾವಧಿಯಲ್ಲಿ ಅನುಷ್ಠಾನಗೊಳ್ಳುತ್ತಿದೆ.
ಮೊದಲನೇ ಸುತ್ತಿನ ಮಿಷನ್ ಇಂದ್ರಧನುಷನ್ ‘ನಗರ ಲಸಿಕಾ ಅಭಿಯಾನ’ ಕಾರ್ಯಕ್ರಮವು ಮೈಸೂರು ನಗರ ವ್ಯಾಪ್ತಿಯಲ್ಲಿರುವ 65 ವಾರ್ಡಗಳಲ್ಲಿ ಸಮೀಕ್ಷಾ ಕಾರ್ಯವನ್ನು ಕೈಗೊಂಡು, 0-2 ವರ್ಷದ 3842 ಮಕ್ಕಳನ್ನು  ಹಾಗೂ 5-6 ವರ್ಷದ 1774 ಮಕ್ಕಳನ್ನು ಗುರುತ್ತಿಸಲಾಗಿದ್ದು, ಮತ್ತು 1122 ಜನ ಗರ್ಭೀಣಿ ಮಹಿಳೆಯರನ್ನು ಸದರಿ ಕಾರ್ಯಕ್ರಮದಲ್ಲಿ ಫಲಾನುಭವಿಗಳಾಗಿ ಗುರುತ್ತಿಸಿ 139 ವಿಶೇಷ ಲಸಿಕಾ ಕೇಂದ್ರಗಳ ಮೂಲಕ ರಕ್ಷಣಾತ್ಮಕ ಲಸಿಕೆಯನ್ನು ನೀಡಲಾಗುದೆ. ಮೊದಲನೆ ಸುತ್ತನ್ನು 16-07-2018 ರಿಂದ 20-07-2018 ವರಗೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ತಿಳಿಸಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿ Special Intensified Mission Indradhanush Programme (IMI-GSA) ಕಾರ್ಯಕ್ರಮಕ್ಕೆ 39 ಗ್ರಾಮಗಳನ್ನು ಗುರುತಿಸಲಾಗಿದ್ದು, ಕಾರ್ಯಕ್ರಮವನ್ನು 18-07-2018 ರಿಂದ 21-07-2018 ವರಗೆ ನಡೆಯಲಿದೆ. ಗ್ರಾಮ ಸ್ವರಾಜ್ ಅಭಿಯಾನದ ಮಿಷನ್ ಇಂದ್ರಧನುಷ್ ಕಾರ್ಯಕ್ರಮದಲ್ಲಿ 0-2 ವರ್ಷದ 257 ಮಕ್ಕಳನ್ನು ಗುರುತಿಸಿ, ಹಾಗೂ 5-6 ವರ್ಷದ 80 ಮಕ್ಕಳನ್ನು ಗುರುತಿಸಲಾಗಿದ್ದು, ಮತ್ತು 65 ಜನ ಗರ್ಭಿಣಿಯರನ್ನು ಕಾರ್ಯಕ್ರಮದಲ್ಲಿ ಫಲಾನುಭವಿಗಳಾಗಿ ಗುರುತಿಸಿ, 42 ಲಸಿಕಾ ಕೇಂದ್ರಗಳನ್ನು ಮೂಲಕ ರಕ್ಷಣಾತ್ಮಕ ಲಸಿಕೆಯನ್ನು ನೀಡಲಾಗುತ್ತದೆ. ಈ ಕಾರ್ಯಕ್ರಮದ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಕೋರಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: