ಮೈಸೂರು

ಮೈಸೂರ್ ಪಾಕ್ ಮಹತ್ವ ತಿಳಿಸಿದ ಅಪೂರ್ವ ಸ್ನೇಹ ಬಳಗ

ಮೈಸೂರು,ಜು.14-ಅಪೂರ್ವ ಸ್ನೇಹ ಬಳಗದ ವತಿಯಿಂದ ಚಾಮುಂಡಿ ಬೆಟ್ಟದಲ್ಲಿ ಶನಿವಾರ ಮೈಸೂರ್ ಪಾಕ್ ಇತಿಹಾಸ ಹಾಗೂ ಮಹತ್ವ ತಿಳಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಮೈಸೂರ್ ಪಾಕ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಡುಗೆ ಸಂಘದ ಉಪಾಧ್ಯಕ್ಷ ಹೆಚ್.ಎನ್.ಶ್ರೀಧರಮೂರ್ತಿ, ಸಿಹಿಯೆಂದರೆ ಸಂತೋಷದ ಸಂಕೇತ. ಆದರೆ ಕೆಲವರು ಹೆಚ್ಚು ಸಿಹಿ ತಿಂದರೆ ಸಕ್ಕರೆ ಕಾಯಿಲೆ ಬರುತ್ತದೆ ಎಂದು ಭಾವಿಸುತ್ತಾರೆ ಇದು ಸುಳ್ಳು ಎಂದು ಹೇಳಿದರು.

ದೇಶ ವಿದೇಶದಲ್ಲೂ ಮೈಸೂರು ಪಾಕ್ ಮೈಸೂರಿನ ಹಿರಿಮೆಯಲ್ಲಿ ಒಂದಾಗಿ ಸ್ಥಾನ ಪಡೆದಿದೆ. ತಮಿಳುನಾಡಿನಲ್ಲಿ ಮೈಸೂರು ಪಾಕ್ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ  ಕೊಡುಗೆಯೇ ಕಾರಣ ಕೆಲವು ದಿನಗಳ ಹಿಂದೆ ಮೈಸೂರು ಪಾಕ್ ಮೈಸೂರನದ್ದಲ್ಲ ಎಂದು ಕೆಲವು ಹೊರ ರಾಜ್ಯದವರು ಖ್ಯಾತೆ ತೆಗೆದಿದ್ದು ಬೇಸರದ ಸಂಗತಿ. ನೂರಾರು ವರ್ಷಗಳಿಂದಲೂ ಶುಭ ಸಮಾರಂಭಗಳಲ್ಲಿ ಮೈಸೂರು ಪಾಕ್ ಇರಲೇಬೇಕು. ಪ್ರವಾಸೋದ್ಯಮ ಇಲಾಖೆ ಮೈಸೂರು ಪಾಕ್ ತಾಯಾರಿಸುವ ಅಡುಗೆ ಉದ್ಯಮವನ್ನು ಸೃಷ್ಟಿಸಲು ಮುಂದಾಗಬೇಕು ಎಂದು ಕರೆ ನೀಡಿದರು.

ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ಮುಳ್ಳೂರು ಗುರುಪ್ರಸಾದ್, ವಿನಯ್ ಕಣಗಾಲ್, ಶ್ರೀಕಾಂತ್ ಕಶ್ಯಪ್, ಡಿ.ಕೆ.ನಾಗಭೂಷನ್, ರಂಗನಾಥ್, ಜಯಸಿಂಹ,  ಸಂದೇಶ್ ಇತರರು ಉಪಸ್ಥಿತರಿದ್ದರು. (ಕೆ.ಎಸ್, ಎಂ.ಎನ್)

Leave a Reply

comments

Related Articles

error: