ಸುದ್ದಿ ಸಂಕ್ಷಿಪ್ತ

ನಾಳೆ ಜ್ಯೋತಿಷ್ಯ ಉಪನ್ಯಾಸ

ಮೈಸೂರು,ಜು.14 : ಇಂಡಿಯನ್ ಕೌನ್ಸಿಲ್ ಆಫ್ ಅಸ್ಟಾಲಾಜಿಕಲ್ ಸೈನ್ಸ್ ನ ಮೈಸೂರು ಚಾಪ್ಟರ್ ವತಿಯಿಂದ ಜು.15ರ ಬೆಳಗ್ಗೆ 9.30ಕ್ಕೆ ಹೋಟೆಲ್ ಪೈವಿಸ್ತಾದಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಖ್ಯಾತ ಜ್ಯೋತಿಷಿ ಗಾಯತ್ರಿ ದೇವಿ ವಾಸುದೇವ್ ಅವರು ಗೇಟ್ ವೇ ಆಫ್ ಜ್ಯೋತಿಷ್ಯ ವಿಷಯವಾಗಿ ಪ್ರವಚನ ನೀಡುವರು. ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ್ ಗೌಡ, ಐಸಿಎಎಸ್ ರಾಷ್ಟ್ರೀಯ ಉಪಾಧ್ಯಕ್ಷ ಜಯರಾಮ್ ಸಿಕಂದರಾಬಾದ್ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗಿಯಾಗುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: