ಮೈಸೂರು

ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ದೇವರಾಜ ಮೊಹಲ್ಲಾದಲ್ಲಿರುವ ನಂಜರಾಜಬಹದ್ದೂರ್ ಛತ್ರದ ಆವರಣದಲ್ಲಿದ್ದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯೊಳಗೆ ಕೊಳೆತ ಸ್ಥಿತಿಯಲ್ಲಿ 25ರಿಂದ 30 ವರ್ಷದ ಅಪರಿಚಿತ ಯುವಕನೊಬ್ಬನ ಶವ ಪತ್ತೆಯಾಗಿದೆ.

ಈ ಶಾಲೆ ಮುಚ್ಚಲ್ಪಟ್ಟಿದ್ದು, 4-5 ದಿನಗಳ ಹಿಂದೆ ಈ ವ್ಯಕ್ತಿ ನೇಣಿಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ. ಈ ವ್ಯಕ್ತಿಯು ಪಾನಮತ್ತನಾಗಿ ಬಂದು ಮೃತಪಟ್ಟಿದ್ದಾನೆ ಎನ್ನಲಾಗಿದೆ.  ಶುಕ್ರವಾರದಂದು ಕೊಳೆತ ವಾಸನೆ ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ದೇವರಾಜ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ನಾಗೇಶ್, ಸಬ್‍-ಇನ್ಸ್‍ಪೆಕ್ಟರ್ ಲೇಪಾಕ್ಷ ಸ್ಥಳ ಮಹಜರು ನಡೆಸಿ, ಶವವನ್ನು ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಶವ ಕೊಳೆತಿರುವುದರಿಂದ ಗುರುತು ಹಿಡಿಯುವುದು ಕಷ್ಟವಾಗಿದ್ದು, ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: