ಲೈಫ್ & ಸ್ಟೈಲ್

ಯಾವ ಆಹಾರ ಯಾವ ಸಮಯದಲ್ಲಿ…?

ಪ್ರತಿಯೊಂದು ಆಹಾರಕ್ಕೂ ಅದರದ್ದೇ ಆದ ಪ್ರಕೃತಿಯಿರುತ್ತದೆ. ಅದರ ಅನುಸಾರ ನಾವದನ್ನು ಸೇವಿಸಬೇಕಾಗುತ್ತದೆ. ಕೆಲವು ಆಹಾರಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಆ್ಯಸಿಡ್ ಉದ್ಭವಿಸಿ ಎಸಿಡಿಟಿ ಉಂಟಾಗಲಿದೆ. ಕೆಲವು ಆಹಾರಗಳನ್ನು ರಾತ್ರಿಯ ವೇಳೆಯಲ್ಲಿ ಸೇವಿಸಿದರೆ ಹಾನಿಕರವಾಗಲಿದೆ. ಹಾಗಾದರೆ ಯಾವ ರೀತಿ ಆಹಾರವನ್ನು ಸೇವಿಸಬೇಕೆನ್ನುವ ಮಾಹಿತಿ ಇಲ್ಲಿದೆ.

apple-webಸೇಬು ; ಬೆಳಿಗ್ಗೆ ಸೇವಿಸಿ. ಇದರಲ್ಲಿರುವ ಫಾಯ್ಬರ್ ಅಂಶ ಪಚನ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಇದನ್ನು ರಾತ್ರಿಯ ವೇಳೆ ಸೇವಿಸುವುದರಿಂದ ಆ್ಯಸಿಡ್ ಹೆಚ್ಚಳವಾಗಿ ಪಚನಕ್ರಿಯೆ ಸರಾಗವಾಗಿ ನಡೆಯುವುದಿಲ್ಲ.

milk_webಹಾಲು : ಹಾಲನ್ನು ರಾತ್ರಿಯ ವೇಳೆಯಲ್ಲಿ ಸೇವಿಸಿ. ಇದರಲ್ಲಿರುವ ಅಮಿನೋ ಆ್ಯಸಿಡ್ಸ್ ಒಳ್ಳೆಯ ನಿದ್ರೆ ಬರುವಂತೆ ಮಾಡಲಿದೆ.ಬೆಳಗಿನ ವೇಳೆಯೂ ಕುಡಿಯಬಹುದು.

curd-webಮೊಸರು : ಹಗಲಿನಲ್ಲಿ ಸೇವಿಸಿ. ಇದನ್ನು ಸೇವಿಸುವುದರಿಂದ ಪಚನಕ್ರಿಯೆ ಸುಲಭವಾಗುತ್ತದೆ. ನೆಗಡಿ, ಶೀತ, ಕೆಮ್ಮುಗಳಾಗಿದ್ದಲ್ಲಿ ಸೇವಿಸಬೇಡಿ. ತೊಂದರೆಯುಂಟಾಗಲಿದೆ.

coffee-cup-webಕಾಫಿ : ಬೆಳಗಿನ ವೇಳೆ ಸೇವಿಸುವುದರಿಂದ ನಿರುತ್ಸಾಹ ದೂರವಾಗಿ ಶರೀರಕ್ಕೆ ಶಕ್ತಿ ದೊರಕಲಿದೆ. ರಾತ್ರಿಯ ವೇಳೆ ಸೇವಿಸುವುದರಿಂದ ನಿದ್ರೆ ಬರುವುದಿಲ್ಲ. ಹೆಚ್ಚು ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ.

egg-webಮೊಟ್ಟೆ : ಬೆಳಗಿನ ಉಪಹಾರದಲ್ಲಿ ಸೇವಿಸಿ. ಪ್ರೋಟೀನ್ ಯುಕ್ತವಾಗಿದ್ದು ದಿನವಿಡೀ ಶಕ್ತಿ ದೊರಕಲಿದೆ. ರಾತ್ರಿಯ ವೇಳೆ ಸೇವಿಸುವುದರಿಂದ ಪ್ರೋಟೀನ್ ಪೂರ್ಣ ಪ್ರಮಾಣದಲ್ಲಿ ಕರಗುವುದಿಲ್ಲ. ಹೊಟ್ಟೆ ಕೆಡುವ ಸಂಭವವಿದೆ.

bananasf-webಬಾಳೆಹಣ್ಣು : ಹಗಲಿನಲ್ಲಿ ಸೇವಿಸಿ. ಇದನ್ನು ತಿನ್ನುವುದರಿಂದ  ಶಕ್ತಿ ದೊರಕಲಿದೆ. ರಾತ್ರಿಯ ವೇಳೆ ಸೇವಿಸುವುದರಿಂದ ಕೆಲವರಿಗೆ ಶೀತ, ಕೆಮ್ಮು ಉಂಟಾಗುತ್ತದೆ.

cheese-webಬೆಣ್ಣೆ : ಪ್ರೋಟೀನ್, ಕ್ಯಾಲ್ಶಿಯಂ ಹೇರಳವಾಗಿದ್ದು, ಬೆಳಿಗ್ಗೆ ಸೇವಿಸುವುದರಿಂದ ಶಕ್ತಿ ದೊರಕಲಿದೆ. ರಾತ್ರಿಯ ವೇಳೆಯಲ್ಲಿ ಸೇವಿಸದಿರಿ. ಇದು ಪಚನವಾಗಲು ಹಲವು ಸಮಯ ಬೇಕಾಗಿರುವುದರಿಂದ ಪಚನಕ್ರಿಯೆ ಸರಿಯಾಗಿ ನಡೆಯುವುದಿಲ್ಲ.

ಪಚನಕ್ರಿಯೆ ಸರಾಗವಾಗಿ ನಡೆಯುವ, ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವಿಸುವುದು ಒಳ್ಳೆಯದು.

Leave a Reply

comments

Related Articles

error: