ಮೈಸೂರು

ವಾಹನ ತಪಾಸಣೆ ವೇಳೆ ಬ್ಯಾರಿಕೇಡ್ ಗೆ ಡಿಕ್ಕಿ : ಬೈಕ್ ಸವಾರನಿಗೆ ಗಾಯ

ಮೈಸೂರು,ಜು.16:- ವಾಹನ ತಪಾಸಣೆ ವೇಳೆ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡಿದ್ದು, ಪೊಲೀಸರೇ ಬ್ಯಾರಿಕೇಡ್ ಎಳೆದು ಅಪಘಾತಕ್ಕೆ ಕಾರಣರಾಗಿದ್ದಾರೆ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆ ಕೆ.ಆರ್.ಎಸ್ ರಸ್ತೆಯಲ್ಲಿರುವ ಜೆ.ಕೆ.ಟೈರ್ ಫ್ಯಾಕ್ಟರಿಯ ಸಮೀಪದ ಚೆಕ್ ಪೋಸ್ಟ್ ಬಳಿ ನಡೆದಿದೆ.

ಗಾಯಗೊಂಡವರನ್ನು ಶ್ರೀರಂಗಪಟ್ಟಣ ತಾಲೂಕಿನ ಪಾಲಳ್ಳಿ ಗ್ರಾಮದ ಸುರೇಶ್ ಎಂದು ಹೇಳಲಾಗಿದ್ದು, ಅವರು ನಿನ್ನೆ  ಕಾರ್ಖಾನೆಗೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಸಂಚಾರ ಪೊಲೀಸರು ತಪಾಸಣೆ ನಡೆಸುತ್ತಿದ್ದರು.ಸುರೇಶ್ ಹೆಲ್ಮೆಟ್ ಧರಿಸದೇ ವೇಗವಾಗಿ ಬರುತ್ತಿದ್ದ ಕಾರಣ ಬ್ಯಾರಿಕೇಟ್ ತಗುಲಿದೆ. ನಿಯಂತ್ರಣ ಕಳೆದುಕೊಂಡ ಸುರೇಶ್ ಕೆಳಗೆ ಬಿದ್ದು, ತಲೆಗೆ ಗಾಯವಾಗಿದೆ. ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದೆ. ಪೊಲೀಸರು ಸರಿಯಾದ ರೀತಿಯಲ್ಲಿ ತಪಾಸಣೆ ನಡೆಸುತ್ತಿಲ್ಲ. ಹೆಲ್ಮೆಟ್ ಹಾಕದವರನ್ನು ಕಳ್ಳರಂತೆ ಹಿಡಿಯುತ್ತಿದ್ದಾರೆ. ವಾಹನ ಸಂಖ್ಯೆ ಬರೆದುಕೊಂಡು ಮನೆಗೆ ನೋಟೀಸ್ ಕಳುಹಿಸಲಿ. ಅದು ಬಿಟ್ಟು ಅವೈಜ್ಞಾನಿಕವಾಗಿ ತಪಾಸಣೆ ನಡೆಸಬಾರದು ಎಂದು ಸಾರ್ವಜನಿಕರು ಪೊಲೀಸರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಇದರಿಂದ ಅರ್ಧಗಂಟೆಗೂ ಹೆಚ್ಚಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: