ಮೈಸೂರು

ಕರ್ನಾಟಕ ರೇಷ್ಮೆ ನಾಡು, ರೇಷ್ಮೆ ಅತ್ಯುತ್ತಮ ವಾಣಿಜ್ಯ ಬೆಳೆ: ಪ್ರೊ.ಕೆ.ಎಸ್.ರಂಗಪ್ಪ ಅಭಿಮತ

ರೇಷ್ಮೆ ಶ್ರೀಮಂತ, ಸಾಂಪ್ರದಾಯಿಕ ಹಾಗೂ ಅತ್ಯುತ್ತಮ ವಾಣಿಜ್ಯ ಬೆಳೆಯಾಗಿದ್ದು ಕರ್ನಾಟಕ ರೇಷ್ಮೆ ನಾಡಾಗಿ ವಾಣಿಜ್ಯೋದ್ಯಮಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ ಎಂದು ಮೈಸೂರು ವಿವಿಯ ಉಪಕುಲಪತಿ ಡಾ.ಕೆ.ಎಸ್.ರಂಗಪ್ಪ ತಿಳಿಸಿದರು.

ಅವರು, ಶುಕ್ರವಾರ ಮೈಸೂರು ವಿವಿಯ ರೇಷ್ಮೆ ಕೃಷಿ ಅಧ್ಯಯನ ವಿಭಾಗದಿಂದ ಡಿ.16 ಮತ್ತು 17ರವರೆಗೆ ಎರಡು ದಿನಗಳ ಕಾಲ, ಮಾನಸಗಂಗೋತ್ರಿಯ ರೇಷ್ಮೆ ವಿಭಾಗದ ಸೆಮಿನಾರ್‍ ಹಾಲ್‍ನಲ್ಲಿ ಹಮ್ಮಿಕೊಂಡಿರುವ ‘ರೇಷ್ಮೆ ಕೃಷಿ ಇತ್ತೀಚಿನ ಪ್ರವೃತ್ತಿಗಳು’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿ, ರೇಷ್ಮೆ ಕೃಷಿ ಗ್ರಾಮೀಣ ಭಾಗದ ಪ್ರಮುಖ ಉದ್ಯೋಗ ಕ್ಷೇತ್ರವಾಗಿದೆ. ವಿಶ್ವದಲ್ಲಿಯೇ ಶೇ.85ರಷ್ಟು ರೇಷ್ಮೆ ಉತ್ಪಾದನೆ ಮಾಡುವುದರೊಂದಿಗೆ ಭಾರತ ಪ್ರಥಮ ಸ್ಥಾನ ಹೊಂದಿದೆ ನಂತರ ಚೀನಾ ಪಡೆದಿದೆ. ರೇಷ್ಮೆಗೆ ಉತ್ತಮ ಮಾರುಕಟ್ಟೆಯೂ ಇದ್ದೂ ನಾಲ್ಕು ಬಗೆಯ ರೇಷ್ಮೆ ಬೆಳೆಯುವ ಏಕೈಕ ದೇಶವಾಗಿದೆ. ವಿಶೇಷ ದಿನಗಳಲ್ಲಿ ಬಳಸುವ ಸಾಂಪ್ರದಾಯಿಕ ರೇಷ್ಮೆ ಸೀರೆ ಹಾಗೂ ಇತರೆ ರೇಷ್ಮೆ ಉಡುಪುಗಳಿಗೆ ಹೆಚ್ಚಿನ ಬೇಡಿಕೆಯಿದೆ ಎಂದರು.

dsc00032-%e0%b2%a1%e0%b3%86%e0%b2%acದೇಶದಲ್ಲಿ 2780 ಮೆಟ್ರಿಕ್  ಟನ್ ರೇಷ್ಮೆ ಬೆಳೆಯಲಾಗುತ್ತಿದ್ದು ರಾಜ್ಯದಲ್ಲಿ 10 ಸಾವಿರ ಮೆಟ್ರಿಕ್ ‍ಟನ್ ಉತ್ಪಾದನೆಗೊಳ್ಳುತ್ತಿದೆ. ಆಫ್ರಿಕಾ ದೇಶಗಳ ವಾತಾವರಣಕ್ಕೆ ಹೊಂದುವ ಬೆಳೆಯಾಗಿದ್ದರೂ ಭಾರತದ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ದೇಶದ ಸಾಮಾಜಿಕ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುತ್ತಿದೆ.  ಸರ್ಕಾರ ಸವಲತ್ತುಗಳನ್ನು ನೀಡಿ ಉತ್ತೇಜಿಸಬಹುದು. ಆದರೆ, ವೈಜ್ಞಾನಿಕ ತಳಹದಿಯಲ್ಲಿ ವಿದ್ಯಾರ್ಥಿಗಳನ್ನು ಸಮರ್ಥರನ್ನಾಗಿರುಸುವ ಗುರುತರ ಜವಾಬ್ದಾರಿ ವಿಶ್ವವಿದ್ಯಾಲಯಗಳ ಮೇಲಿದ್ದು ಮೈಸೂರು ವಿವಿಯ ರೇಷ್ಮೆ ವಿಭಾಗವೂ ಅತ್ಯುತ್ತಮ ಸೇವೆಯನ್ನು ನೀಡುತ್ತಿದೆ. ರೈತರಿಗಾಗಿ ವಿಚಾರ ಸಂಕಿರಣವನ್ನು ಏರ್ಪಡಿಸಿ ಪ್ರಸ್ತುತ ಜರುಗಿರುವ ಸಂಶೋಧನೆಗಳ ಹಾಗೂ ವೈಜ್ಞಾನಿಕ ಬದಲಾವಣೆ ಬಗ್ಗೆ ಜಾಗೃತರನ್ನಾಗಿರುವ ಅವಶ್ಯವಿದ್ದು ಈ ಬಗ್ಗೆ ವಿವಿಯ ರೇಷ್ಮೆ ವಿಭಾಗವು ಮುಂದಾಗಬೇಕೆಂದು ಆಶಿಸಿದರು.

ಕೇಂದ್ರದ ನಿರ್ದೇಶಕ ಡಾ.ವಿ.ಶಿವಪ್ರಸಾದ್ ಮಾತನಾಡಿ, ಕಳೆದ 10 ಹತ್ತು ವರ್ಷಗಳ ಹಿಂದಿನ ಪಠ್ಯಪುಸ್ತಕಗಳೇ ಇದ್ದು ವಿದ್ಯಾರ್ಥಿಗಳಿಗೆ ನೂತನ ಪರಿಷ್ಕೃತ ಪಠ್ಯಕ್ರಮ ಅವಶ್ಯವಿದೆ. ಪದೇ ಪದೇ ಹಳೆ ವಿಷಯವನ್ನೇ ಓದುತ್ತಿರುವುದು ಬಾಯಿಪಾಠ ಮಾಡುವುದು ತರವಲ್ಲ. ಆದ್ದರಿಂದ, ವಿದ್ಯಾರ್ಥಿಗಳು ನೂತನ ಸಂಶೋಧನೆಗಳ ಜರ್ನಲ್ಸ್ ಗಳನ್ನು, ಅಂತರ್ಜಾಲವನ್ನು ಶೋಧಿಸಿ ನವನವೀನತೆಯ ಜ್ಞಾನವನ್ನು ರೂಢಿಸಿಕೊಳ್ಳಿ ಎಂದು ಕರೆ ನೀಡಿದರು.

ವಿಚಾರ ಸಂಕಿರಣದಲ್ಲಿ ಸಂಘಟಕ ಅಧ್ಯಕ್ಷ ಪ್ರೊ.ಬಸವಯ್ಯ, ಕಾರ್ಯದರ್ಶಿ ಡಾ.ಟಿ.ಎಸ್.ಜಗದೀಶ್‍ ಕುಮಾರ್, ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸಮಾರೋಪ ಸಮಾರಂಭ: ಡಿ.17ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನ ವಿವಿಯ ವಿಶ್ರಾಂತ ಉಪಕುಲಪತಿ ಡಾ.ಎಸ್.ಬಿ.ದಂಡಿನ್ ಉಪಸ್ಥಿತರಿರುವರು, ಮೈ.ವಿವಿ ಕುಲಸಚಿವ ಪ್ರೊ.ಆರ್.ರಾಜಣ್ಣ ಅಧ್ಯಕ್ಷತೆ ವಹಿಸುವರು.

Leave a Reply

comments

Related Articles

error: