ಪ್ರಮುಖ ಸುದ್ದಿ

ಮೊಬೈಲ್ ಕದ್ದು ಜೂಮ್ ಕಾರ್ ಬುಕ್ ಮಾಡಿ ಹೈವೇನಲ್ಲಿ ದರೋಡೆ ನಡೆಸುತ್ತಿದ್ದ ದರೋಡೆಕೋರರ ಬಂಧನ

ರಾಜ್ಯ(ಬೆಂಗಳೂರು)ಜು.16:- ಜೂಮ್ ಕಾರಿನಲ್ಲಿ ಬಂದು ಹೈವೇಯಲ್ಲಿ ದರೋಡೆ ಮಾಡುತ್ತಿದ್ದ 7 ಮಂದಿ ದರೋಡೆಕೋರರನ್ನು ರಾಜಾಜಿ ನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಧುಸೂಧನ್ ಗೌಡ, ಅಭಿಷೇಕ್, ಕಿಶೋರ್, ಪ್ರಕಾಶ್, ರಾಹುಲ್, ಹರೀಶ್, ಪ್ರವೀಣ ಬಂಧಿತ ಆರೋಪಿಗಳು. ಇವರು ಮೊಬೈಲ್ ಕದ್ದು ಕದ್ದ ಮೊಬೈಲ್ ನಲ್ಲಿ ಜೂಮ್ ಕಾರು ಬುಕ್ ಮಾಡಿ ಆ ಕಾರಿನಲ್ಲೇ ದರೋಡೆ ನಡೆಸುತ್ತಿದ್ದರಂತೆ. ಬಂಧಿತರಿಂದ ಎರಡು ಜೂಮ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಟೆಕ್ಕಿಯೊಬ್ಬರು ಬೆಳಗ್ಗಿನ ಜಾವ ಏರ್ ಪೋರ್ಟ್  ನಿಂದ ರಾಜಾಜಿ ನಗರಕ್ಕೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಟೆಕ್ಕಿಯನ್ನು ಅಡ್ಡಗಟ್ಟಿ ಮೂರು ಸಾವಿರ ರೂ. ದೋಚಿದ್ದರು. ಈ ಕುರಿತು ಟೆಕ್ಕಿ ರಾಜಾಜಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ವೇಳೆ ದೊಡ್ಡ ಪ್ರಕರಣಗಳೇ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳು ಮೊಬೈಲ್  ಕದ್ದು ಮೊಬೈಲ್ ನಿಂದ ಜೂಮ್ ಕಾರನ್ನು ಬುಕ್ ಮಾಡಿ ನಂತರ ಅದೇ ಕಾರಿನಲ್ಲಿ ಹೈವೇಯಲ್ಲಿ ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆ ನಡೆಸುತ್ತಿದ್ದರು ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: