ಮೈಸೂರು

17.50 ಕೋಟಿ ವೆಚ್ಚದ ನಗರದ ಸಮಗ್ರ ಮೂಲಭೂತ ಸೌಕರ್ಯ ಕಾಮಗಾರಿಗೆ ಗುದ್ದಲಿಪೂಜೆ

ಮೈಸೂರು,ಜು.16:- ನಗರೋತ್ಪನ್ನ ಯೋಜನೆಯಡಿಯಲ್ಲಿ ಸುಮಾರು 17.50 ಕೋಟಿ ವೆಚ್ಚದ ನಗರದ ಸಮಗ್ರ ಮೂಲಭೂತ ಸೌಕರ್ಯ ಕಾಮಗಾರಿಗೆ ಇಂದು ನಗರಸಭೆ ಕಛೇರಿಯ ಆವರಣದಲ್ಲಿ ಸಂಸದ ಧ್ರುವನಾರಾಯಣ್ ಶಾಸಕ ಹರ್ಷವರ್ಧನ್ ಗುದ್ದಲಿಪೂಜೆ ನೆರವೇರಿಸಿದರು.

ಗುದ್ದಲಿಪೂಜೆ ಸಮಯದಲ್ಲಿ ಸಂಸದರು, ಶಾಸಕರು ಸರಿಯಾದ ಸಮಯಕ್ಕೆ ಬಂದರೂ ಒಬ್ಬರೊಬ್ಬರೂ ಮುಖಾ ಮುಖಿಯಾದರೂ ಮಾತನಾಡದಿರುವುದು ವಿಶೇಷವಾದರೂ, ಅಭಿವೃದ್ಧಿ ವಿಷಯದಲ್ಲಿ ಇಬ್ಬರೂ ಕೈಜೋಡಿಸಿದ್ದಾರೆ. ಇದೇ ಸಂದರ್ಭದಲ್ಲಿ ನಗರಸಭೆ ವತಿಯಿಂದ ಸಂಸದರನ್ನು ಹಾಗೂ ಶಾಸಕರನ್ನು ನಗರಸಭಾ ಸದಸ್ಯರನ್ನು ಕೂಡ ಸನ್ಮಾನಿಸಲಾಯಿತು.

ನಂತರ ಮಾತನಾಡಿದ ಸಂಸದ ಧ್ರುವನಾರಾಯಣ ಅವರು ನಂಜನಗೂಡು ದಕ್ಷಿಣ ಕಾಶಿ ಶ್ರೀಕಂಠೇಶ್ವರ ದೇವಾಲಯ ಪ್ರಸಿದ್ಧ ಸ್ಥಳವಾಗಿದೆ. ಇಲ್ಲಿಗೆ ನಾನಾ ಜಿಲ್ಲೆಯಿಂದ ಭಕ್ತರು ಬರುವುದು ಹೆಚ್ಚಾಗಿದೆ. ಜೊತೆಗೆ ನಗರದಲ್ಲಿನ ಜನಸಂಖ್ಯೆ ಹೆಚ್ಚಾಗಿ ಆದ್ದರಿಂದ ಯಾವುದೇ ಮೂಲಭೂತ ಸೌಕರ್ಯಕ್ಕೆ ಅಡ್ಡಿಯಾಗದಂತೆ ಸುಮಾರು 17.50 ಕೋಟಿ ವೆಚ್ಚದ ಸಮಗ್ರ ಮೂಲಭೂತ ಸೌಕರ್ಯಕ್ಕೆ ಹಣ ಬಿಡುಗಡೆಯಾಗಿದೆ. ಸುಮಾರು 18 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕು. ಗುಣಮಟ್ಟದ ಕಾಮಗಾರಿ ನಡೆಯಬೇಕು. ಜೊತೆಗೆ ನಗರಸಭೆಯ ಅಧಿಕಾರಿಗಳು ಜೊತೆಗೂಡಿ ಉತ್ತಮ ಕಾಮಗಾರಿ ನಡೆಸಬೇಕೆಂದು ತಿಳಿಸಿದರು.

ಶಾಸಕ ಹರ್ಷವರ್ಧನ್ ಮಾತನಾಡಿ ನಗರದ ಮೂಲಭೂತ ಸೌಕರ್ಯಕ್ಕೆ ಮಾಜಿ ಸಚಿವ ಶ್ರೀನಿವಾಸ್‍ಪ್ರಸಾದ್‍ ಅವರು ಅನೇಕ ಬಾರಿ ಹಣ ಬಿಡುಗಡೆ ಮಾಡಿಸಿ ಉತ್ತಮ ಕೆಲಸ ಮಾಡಿದ್ದಾರೆ. ಜೊತೆಗೆ ಇನ್ನೂ ಹೆಚ್ಚಿನ ಮೂಲಭೂತ ಸೌಕರ್ಯದ ಬಗ್ಗೆ ಗಮನಹರಿಸುತ್ತೇನೆ ಎಂದರು. ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಜೊತೆ ತಾಲೂಕು ಮತ್ತು ನಗರದ ಅಭಿವೃದ್ಧಿ ಬಗ್ಗೆ ಚರ್ಚಿಸಿದರಲ್ಲದೇ ಸ್ಥಳದಲ್ಲೇ ಕಾರ್ಯಕರ್ತರ ಸಣ್ಣಪುಟ್ಟ ಸಮಸ್ಯೆಗಳನ್ನು ಪೋನ್ ಮುಖಾಂತರ ಬಗೆಹರಿಸಿದರು.

ಕಾರ್ಯಕ್ರಮದಲ್ಲಿ ನಗರ ಆಯುಕ್ತ ವಿಜಯ, ಅಧ್ಯಕ್ಷೆ ಪುಷ್ಪ, ಉಪಾಧ್ಯಕ್ಷ ಪ್ರದೀಪ್, ದಂಡಾಧಿಕಾರಿ ದಯಾನಂದ್, ನಗರಸಭೆ ಸದಸ್ಯರು, ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: