ದೇಶ

ನಟರು ಸಂಭಾಷಣೆಗಳಿಗೆ ಹೊಣೆಯಲ್ಲ: ದೆಹಲಿ ಹೈ ಕೋರ್ಟ್

ನವದೆಹಲಿ,ಜು.16-ನಟರನ್ನು ಚಿತ್ರದಲ್ಲಿನ ಸಂಭಾಷಣೆಗಳಿಗೆ ಹೊಣೆ ಮಾಡಲು ಸಾಧ್ಯವಿಲ್ಲ ಎಂದು ದೆಹಲಿ ಹೈ ಕೋರ್ಟ್ ಹೇಳಿದೆ.

ಕಾಂಗ್ರೆಸ್ ಬೆಂಬಲಿಗ ನಿಖಿಲ್ ಭಲ್ಲಾ ಎಂಬವರು ಅನುರಾಗ್ ಕಶ್ಯಪ್ ನಿರ್ದೇಶನದ ‘ಸೇಕ್ರೆಡ್ ಗೇಮ್ಸ್‌’ ವೆಬ್ ಸಿರೀಸ್ ನ ಸಂಭಾಷಣೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು.

ಅಲ್ಲದೆ, ವೆಬ್ ಸೀರಿಸ್ ನಲ್ಲಿ ಕೆಲವೊಂದು ಅಂಶಗಳನ್ನು ತೆಗೆದುಹಾಕಬೇಕೆಂದೂ ಕಾಂಗ್ರೆಸ್ ಬೆಂಬಲಿಗನ ಪರ ವಕೀಲರಾದ ಶಾಂಕ್ ಗರ್ಗ್ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಸಂಭಾಷಣೆಗಳಿಗೆ ನಟರನ್ನು ಹೊಣೆ ಮಾಡಲಾಗುವುದಿಲ್ಲ ಎಂದು ಹೇಳಿ ಮುಂದಿನ ವಿಚಾರಣೆಯನ್ನು ಜು.19ಕ್ಕೆ ಮುಂದೂಡಿದೆ. (ಎಂ.ಎನ್)

Leave a Reply

comments

Related Articles

error: