ಮನರಂಜನೆ

ಹಾರ್ಸ್ ರೈಡಿಂಗ್ ಕಲಿಯುತ್ತಿರುವ ನಟಿ ಶಾನ್ವಿ ಶ್ರೀವಾಸ್ತವ್

ಬೆಂಗಳೂರು,ಜು.16-ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ ಶಾನ್ವಿ ಶ್ರೀವಾಸ್ತವ್ ಬಿಡುವಿನ ವೇಳೆ ಹಾರ್ಸ್ ರೈಡಿಂಗ್ ಕಲಿಯುತ್ತಿದ್ದಾರೆ.

‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಪಾತ್ರಕ್ಕಾಗಾ ಅಥವಾ ಹೊಸ ಚಿತ್ರದ ತಯಾರಿಗಾಗಿ ಹಾರ್ಸ್ ರೈಡಿಂಗ್ ಕಲಿಯುತ್ತಿದ್ದೀರಾ ಎಂದು ಅವರನ್ನು ಕೇಳಿದರೆ ಇದು ಕಲಿಕೆಗಾಗಿ ಎಂದಿದ್ದಾರೆ.

ಆ್ಯಕ್ಟರ್ ಅಂತೆನಿಸಿಕೊಂಡಾಗ ಎಲ್ಲ ತರಹದ ಕಲಿಕೆ ಅಗತ್ಯ. ನನಗೆ ಮೊದಲಿನಿಂದಲೂ ಈ ತರಹದ ಸಾಹಸದ ಹುಚ್ಚು. ಕಾರು, ಬೈಕು ಓಡಿಸುವ ಹಾಗೆಯೇ ಹಾರ್ಸ್ ರೈಡಿಂಗ್ ಮಾಡ್ಬೇಕು ಅನ್ನೋ ಆಸೆ. ಅದಕ್ಕಾಗಿಯೇ ಈಗ ತರಬೇತಿ ಪಡೆಯುತ್ತಿದ್ದೇನೆ. ಎರಡು ದಿನಗಳ ಮಟ್ಟಿಗೆ ಈಗ ತರಬೇತಿ ನಡೆದಿದೆ. ಇಲ್ಲಿಯೇ ಸಹಕಾರ ನಗರದಲ್ಲಿರುವ ಹಾರ್ಸ್ ರೈಡಿಂಗ್ ತರಬೇತಿ ಕೇಂದ್ರದಲ್ಲಿ ಅಭ್ಯಾಸ ನಡೆದಿದೆ. ಇನ್ನು 10 ದಿನಗಳು ಬಾಕಿ ಉಳಿದಿವೆ.

ಹಾರ್ಸ್ ರೈಡಿಂಗ್ ಕಲಿಕೆ ಅಷ್ಟು ಸುಲಭವಾದದ್ದಲ್ಲ ಅನ್ನೋದು ನನಗೆ ಈಗ ಗೊತ್ತಾಗುತ್ತಿದೆ. ಕುದುರೆಗಳ ಮನಸ್ಥಿತಿ, ಪರಿಸ್ಥಿತಿ ಅಧ್ಯಯನ ಮಾಡಿಕೊಂಡೇ ತರಬೇತಿ ಶುರು ಮಾಡಬೇಕು. ಏನಾದ್ರೂ ಯಾಮಾರಿ ರೈಡಿಂಗ್ ಮಾಡಲು ಹೋದರೆ ಅವು ಸಿಟ್ಟು ಬಂದು ಬೀಸಾಕುವುದು ಗ್ಯಾರಂಟಿ. ಆ ಭಯದಲ್ಲೇ ಕಲಿಕೆ ನಡೆದಿದೆ. ಆದರೂ ಖುಷಿ ಆಗುತ್ತಿದೆ ಎಂದಿದ್ದಾರೆ ಶಾನ್ವಿ. (ಎಂ.ಎನ್)

Leave a Reply

comments

Related Articles

error: