
ಮೈಸೂರು
ಜೆಡಿಎಸ್ ನಗರಾಧ್ಯಕ್ಷ-ಬ್ಲಾಕ್ ಅಧ್ಯಕ್ಷರ ಅಧಿಕಾರ ಸ್ವೀಕಾರ
ಜೆಡಿಎಸ್ ನಗರಾಧ್ಯಕ್ಷ ಹಾಗೂ ಆರು ಬ್ಲಾಕ್ಗಳ ಅಧ್ಯಕ್ಷರು ಶುಕ್ರವಾರ ಮೈಸೂರಿನ ಪಕ್ಷದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಶಾಸಕ ಸಾರಾ ಮಹೇಶ್, ಮೇಯರ್ ರವಿಕುಮಾರ್ ಸಮ್ಮುಖದಲ್ಲಿ ಅಧಿಕಾರವನ್ನು ಸ್ವೀಕರಿಸಿದರು. ಜೆಡಿಎಸ್ ನಗರಾಧ್ಯಕ್ಷರಾಗಿ ಕೆ.ಹರೀಶ್ಗೌಡ, ಕೃಷ್ಣರಾಜ ಬ್ಲಾಕ್ನ ಅಧ್ಯಕ್ಷರಾಗಿ ಆರ್.ಎ.ರಾಧಾಕೃಷ್ಣ, ನಜೀರ್ ಸಾಬ್ ಬ್ಲಾಕ್ನ ಅಧ್ಯಕ್ಷರಾಗಿ ಮೊಹಮ್ಮದ್ ಶರೀಫ್, ಚಾಮರಾಜ ಬ್ಲಾಕ್ನ ಅಧ್ಯಕ್ಷರಾಗಿ ಆರ್.ಎಲ್.ಅನಂತನಾರಾಯಣ, ನರಸಿಂಹರಾಜ ಬ್ಲಾಕ್ನ ಅಧ್ಯಕ್ಷರಾಗಿ ಎಂ.ಎನ್.ರಾಮು, ಬಂಗಾರಪ್ಪ ಬ್ಲಾಕ್ನ ಅಧ್ಯಕ್ಷರಾಗಿ ಸಂತೋಷ್, ಶಾಂತವೇರಿ ಗೋಪಾಲಗೌಡ ಬ್ಲಾಕ್ನ ಅಧ್ಯಕ್ಷರಾಗಿ ಶ್ರೀನಿವಾಸ್ ಅಧಿಕಾರ ಸ್ವೀಕರಿಸಿದರು.
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಬೃಹತ್ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಮಾಜಿ ಮೇಯರ್ ಸಂದೇಶ್ ಸ್ವಾಮಿ,ಜೆಡಿಎಸ್ ಮುಖಂಡ ಸಂತೋಷ್, ಜಿಪಂ ಸದಸ್ಯ ದ್ವಾರ್ಕಿ, ಶರಾವತಿ ವೆಂಕಟೇಶ್, ಮಾಜಿ ಮೇಯರ್ ಭೈರಪ್ಪ, ಲಾರಿ ಸೋಮಣ್ಣ, ಎಂ.ಎನ್.ರಾಮು, ಎಸ್.ಬಿ.ಎಂ ಮಂಜು, ಉದ್ಯಮಿ ನಾರಾಯಣ ಮೂರ್ತಿ ಸೇರಿದಂತೆ ಜೆಡಿಎಸ್ನ ಪಾಲಿಕೆ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.