ಪ್ರಮುಖ ಸುದ್ದಿ

ಆಸ್ತಿ ತೆರಿಗೆ ಪಾವತಿಸದೇ ತಪ್ಪಿಸಿಕೊಳ್ಳುವ ಮಾಲೀಕರನ್ನು ಪತ್ತೆಮಾಡಲು ಬಿಬಿಎಂಪಿಗೆ ಇನ್ನು ಮುಂದೆ ಇಸ್ರೋ ನೆರವು

ರಾಜ್ಯ(ಬೆಂಗಳೂರು)ಜು.17:- ಆಸ್ತಿ ತೆರಿಗೆ ಪಾವತಿಸದೇ ತಪ್ಪಿಸಿಕೊಳ್ಳುವ ಮಾಲೀಕರನ್ನು ಪತ್ತೆಮಾಡಲು ಬಿಬಿಎಂಪಿಗೆ ಇನ್ನು ಮುಂದೆ ಇಸ್ರೋ ನೆರವು ನೀಡಲಿದೆ.

ಬಿಬಿಎಂಪಿಗೆ ಬರೋಬ್ಬರಿ 500 ಕೋಟಿಗೂ ಹೆಚ್ಚು ತೆರಿಗೆ ವಂಚನೆಯಾಗಿದೆ. ಇನ್ನು ಮುಂದೆ ಇಂತಹ ವಂಚನೆಯಿಂದ ತಪ್ಪಿಸಿಕೊಳ್ಳಲು ಹಾಗೂ ಉಳಿದ ಆಸ್ತಿಗಳಿಂದಾಗುವ ವಂಚನೆ ಪತ್ತೆ ಹಚ್ಚಲು ಬಿಬಿಎಂಪಿ ಇಸ್ರೋದ ನೆರವು ಪಡೆಯುತ್ತಿದೆ. ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿನ ಬೃಹತ್ ಕಟ್ಟಡಗಳ ವಿವರವನ್ನು ತಪ್ಪಾಗಿ ನೀಡಿ ವಂಚಿಸುತ್ತಿರುವವರ ಪತ್ತೆಗೆ ಟೋಟಲ್ ಸ್ಟೇಷನ್ ಸರ್ವೇ ನಡೆಸಲಾಗಿದೆ. ಆಸ್ತಿ ಮಾಲಿಕರಿಗೆ ಡಿಮ್ಯಾಂಡ್ ನೋಟೀಸ್ ನೀಡಲಾಗಿದೆ.

ಬಿಬಿಎಂಪಿ ಅಧಿಕಾರಿಗಳ ಜಾಣ ಕುರುಡು ಕಳೆದೆರೆಡು ವರ್ಷಗಳ ಕಟ್ಟಡದ ಚಿತ್ರ ಹಾಗೂ ಹೊಸದಾಗಿ ನೀಡಲಾಗುವ ಚಿತ್ರದಲ್ಲಿ ಹೋಲಿಕೆ ಮಾಡಿ ಎಷ್ಟು ಕಟ್ಟಡಗಳು ಹೊಸದಾಗಿ ನಿರ್ಮಾಣವಾಗಿದೆ ಎಂಬುದನ್ನು ಪತ್ತೆ ಮಾಡಲಾಗುತ್ತದೆ. ಅದರಿಂದ ಆ ಆಸ್ತಿಗಳಿಗೆ ತೆರಿಗೆ ಪಾವತಿಸುವಂತೆ ನೋಟೀಸ್ ನೀಡಲಾಗುತ್ತದೆ. ಕಳೆದೆರೆಡು ವರ್ಷಗಳ ಹಿಂದೆ ಕೆಲವುಕಡೆಗಳಲ್ಲಿ ಡ್ರೋನ್ ಬಳಸಿ ಪ್ರಾಯೋಗಿಕವಾಗಿ ಆಸ್ತಿಗಳ ಸರ್ವೇ ಮಾಡಲಾಗಿತ್ತು. ಇದೀಗ ಪೈಲಟ್ ಯೋಜನೆಯಲ್ಲಿ ಯಾವುದಾದರೊಂದು ವಲಯ ವ್ಯಾಪ್ತಿಯಲ್ಲಿನ ಆಸ್ತಿಗಳ ವಿಸ್ತೀರ್ಣವನ್ನು ಅಳತೆ ಮಾಡಲಾಗುತ್ತದೆ. ಡ್ರೋನ್ ಕ್ಯಾಮರಾ ಮೂಲಕ ಅಳತೆ ಹಾಗೂ ಆಸ್ತಿಗಳ ಏರಿಯಲ್ ಸರ್ವೇ ನಡೆಸಲೂ ನಿರ್ಧರಿಸಲಾಗಿದೆ. ಹಿಂದಿನಿಂದಲೂ ಇದ್ದ ಈ ಪ್ರಸ್ತಾವನೆಗೆ ಈಗ ಚಾಲನೆ ಸಿಕ್ಕಿದೆ. ತೆರಿಗೆ ಕಟ್ಟದ ಹೊಸ ಆಸ್ತಿಗಳ ಪತ್ತೆ, ಈಗಾಗಲೇ ತೆರಿಗೆ ವ್ಯಾಪ್ತಿಗೆ ಒಳಪಟ್ಟಿರುವ ಆಸ್ತಿಗಳು ಬಿಬಿಎಂಪಿಯಿಂದ ಅನುಮತಿ ಪಡೆದು ನಿರ್ಮಾಣ ಮಾಡಲಾಗಿದೆಯೇ ಎಂಬುದನ್ನು ಇಸ್ರೋ ನೀಡುವ ಸ್ಯಾಟಲೈಟ್ ಇಮೇಜ್ ಮೂಲಕ ತಿಳಿದುಕೊಳ್ಳಲಾಗುತ್ತದೆ. ಹೊಸದಾಗಿ ನಿರ್ಮಾಣವಾಗಿರುವ ಮತ್ತು ತೆರಿಗೆ ವ್ಯಾಪ್ತಿಗೊಳಪಡದ ಆಸ್ತಿಗಳನ್ನು ಕೂಡ ಸ್ಯಾಟಲೈಟ್ ಇಮೇಜ್ ಬಳಸಿ ಪತ್ತೆ ಮಾಡಲಾಗುತ್ತದೆ.

ಅನ್‌ಮ್ಯಾನ್ಡ್ ಏರಿಯಲ್ ಸಿಸ್ಟಂ ಮೂಲಕ ಸರ್ವೆ ಡ್ರೋನ್ ಕ್ಯಾಮರಾ ಬಳಸಿ ಆಸ್ತಿಗಳ ಏರಿಯಲ್ ಸರ್ವೇ ಮಾಡುವ ಕುರಿತು ಖಾಸಗಿ ಸಂಸ್ಥೆಯೊಂದಿಗೆ ಚರ್ಚೆ ನಡೆಸಲಾಗುತ್ತದೆ. ೨-೩ ಸಭೆಗಳ ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.

ಕಳೆದೆರಡು ವರ್ಷಗಳ ಹಿಂದೆ ಜಿಐಎಸ್ ಮ್ಯಾಪಿಂಗ್ ಮಾಡಿ 16ಲಕ್ಷವಿದ್ದ ಆಸ್ತಿಗಳ ಸಂಖ್ಯೆ 19 ಲಕ್ಷಕ್ಕೆ ಬಿಬಿಎಂಪಿ ಹೆಚ್ಚಿದೆ. ಆದರೆ, ಆಸ್ತಿಗಳ ಸಂಖ್ಯೆ 20 ಲಕ್ಷಕ್ಕೂ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಆಸ್ತಿಗಳನ್ನು ಪತ್ತೆಗೆ ಇಸ್ರೋ ನೆರವು ಅಗತ್ಯ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: