ದೇಶಪ್ರಮುಖ ಸುದ್ದಿ

ಬಿಜೆಪಿಗೆ ಪಕ್ಷಕ್ಕಿಂತ ದೇಶದ ಹಿತಾಸಕ್ತಿ ಮುಖ್ಯ: ಪ್ರಧಾನಿ ಮೋದಿ

2ಜಿ ಮತ್ತು ಕಲ್ಲಿದ್ದಲು ಕಡತ ನಾಪತ್ತೆ ಹಗರಣಗಳ ಸಮಯದಲ್ಲಿ ವಿಪಕ್ಷಗಳು ಒಂದಾಗಿ ಹೋರಾಡಬಹುದಿತ್ತು, ಆದರೆ, ಈಗ ಕಪ್ಪುಹಣ, ಭ್ರಷ್ಟಾಚಾರ ಮಟ್ಟ ಹಾಕಲು ಕೇಂದ್ರ ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ವಿಪಕ್ಷಗಳು ಒಂದಾಗಿವೆ. ಕಾಂಗ್ರೆಸ್‍ಗೆ ದೇಶಕ್ಕಿಂತ ಪಕ್ಷ ಮುಖ್ಯ. ಆದರೆ, ಬಿಜೆಪಿಗೆ ದೇಶ ಮತ್ತು ದೇಶದ ಹಿತಾಸಕ್ತಿಯೇ ಮುಖ್ಯ ಎಂದು ಪ್ರದಾನಿ ನರೇಂದ್ರ ಮೋದಿ ಹೇಳಿದರು.

ಕಪ್ಪುಹಣ ಮಟ್ಟ ಹಾಕುವ ನಿಟ್ಟಿನಲ್ಲಿ 500 ಮತ್ತು 1000 ರೂ. ನೋಟು ನಿಷೇಧಿಸಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಶುಕ್ರವಾರ ಪಕ್ಷದ ಸಂಸದೀಯ ಸಭೆಯಲ್ಲಿ ಬಿಜೆಪಿ ಸಂಸದರನ್ನು ಉದ್ದೇಶಿಸಿ ಮಾತನಾಡಿದರು.

ಡಿಜಿಟಲ್ ಅರ್ಥ ವ್ಯವಸ್ಥೆಯಿಂದ ಪಾರದರ್ಶಕ ವ್ಯವಹಾರ ಸಾಧ್ಯ. ಕೇಂದ್ರವು ನಗದು ರಹಿತ ‘ಡಿಜಿಟಲ್’ ವ್ಯವಹಾರ ನಡೆಸಲು ಜನರನ್ನು ಪ್ರೋತ್ಸಾಹಿಸುತ್ತಿದೆ ಎಂದು ಮೋದಿ ತಿಳಿಸಿದರು.

ರಾಹುಲ್ ಗಾಂಧಿ ಭೇಟಿ: ರೈತರ ಸಾಲ ಮನ್ನಾ ಕುರಿತಂತೆ ಚರ್ಚಿಸಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಸುಮಾರು 5 ನಿಮಿಷಗಳ ಕಾಲ ಪ್ರಧಾನಿಯೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ ಅವರು, ಮನವಿ ಪತ್ರವನ್ನು ಪ್ರಧಾನಿ ಮೋದಿ ಅವರು ಸ್ವೀಕರಿಸಿದ್ದಾರೆ. ರೈತರು ಸಂಕಷ್ಟದಲ್ಲಿರುವುದನ್ನು ಅವರು ಒಪ್ಪಿಕೊಂಡಿದ್ದು, ರೈತರ ಸಾಲ ಮನ್ನಾ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದ್ದಾರೆ.

Leave a Reply

comments

Related Articles

error: